ಟಾಸ್ ಗೆದ್ದು ಬ್ಯಾಟಿಂಗ್ಗಿಳಿದ ಇಂಗ್ಲೆಂಡ್ ಜೋ ರೂಟ್ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 309 ರನ್ ಗಳಿಸಿತ್ತು. ಇಯಾನ್ ಬೆಲ್ 49 ರನ್ , ಮೋಯಿನ್ ಅಲಿ 15 ರನ್, ಗ್ಯಾರಿ ಬ್ಯಾಲೆನ್ಸ್ 6 ರನ್, ಜೋ ರೂಟ್ 121 ರನ್, ಎವೋನ್ ಮಾರ್ಗನ್ 27ರನ್ , ಜೇಮ್ಸ್ ಟಯ್ಲರ್ 25 ರನ್ ರನ್ ಗಳಿಸಿ ಔಟಾದರು. ಜೋಸ್ ಬಟ್ಲರ್ 39 ರನ್ ಮತ್ತು ಕ್ರಿಸ್ ವೋಕ್ಸ್9 ರನ್ ಗಳಿಸಿ ಔಟಾಗದೆ ಉಳಿದರು.
ತಿಲಕರತ್ನ ದಿಲ್ಶಾನ್ ಮತ್ತು ಲಾಹಿರು ತಿರಿಮಾನ್ನೆ ಮುರಿಯದ ಮೊದಲ ವಿಕೆಟ್ಗೆ 100 ರನ್ ಜೊತೆಯಾಟವಾಡಿದರು. ಈ ವೇಳೆ ದಿಲ್ಶಾನ್ 44 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದಾಗ ಔಟಾದರು. ಬಳಿಕ ಬಂದ ಸಂಗಕ್ಕಾರ ಕೇವಲ 70 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ ತಮ್ಮ ಕ್ರಿಕೆಟ್ ಜೀವನದ ಅತಿ ವೇಗದ ಶತಕ ದಾಖಲಿಸಿದರು. ಅವರು ಭರ್ಜರಿ 11 ಬೌಂಡರಿ ಮತ್ತು 2 ಸಿಕ್ಸರ್ಗಳ ಮೂಲಕ 117 ರನ್ಗಳಿಸಿ ಅಜೇಯರಾಗಿ ಉಳಿದರು. ಇವರಿಗೆ ಉತ್ತಮ ಸಾಥ್ ನೀಡಿದ ಲಾಹಿರು ತಿರುಮಾನ್ನೆ 143 ಎಸೆತಗಳಲ್ಲಿ 139 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.