1000 ರನ್ ಸಿಡಿಸಿದ ಪ್ರಣವ್ ಧನವಾಡೆ ಶಾಲಾ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ

ಮಂಗಳವಾರ, 5 ಜನವರಿ 2016 (13:51 IST)
ಮುಂಬೈ ಕ್ರಿಕೆಟ್ ಸಂಸ್ಥೆಯ ಅಂತರ್ ಶಾಲೆ ಕ್ರಿಕೆಟ್  ಎಚ್.ಟಿ. ಭಂಡಾರಿ ಕಪ್ ಟೂರ್ನಿಯಲ್ಲಿ 15 ವರ್ಷದ ಬಾಲಕ ಪ್ರಣವ್ ಧನವಾಡೆ  1000 ರನ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾನೆ.  ಪ್ರಣವ್ 323  ಎಸೆತಗಳಲ್ಲಿ 1002 ರನ್ ಸಿಡಿಸಿದ ಪ್ರಣವ್ ಸ್ಕೋರಿನಲ್ಲಿ 124 ಫೋರ್, 59 ಸಿಕ್ಸರ್‌ಗಳಿದ್ದವು.

 ಮುಂಬೈನ ಕೆಸಿ ಗಾಂಧಿ ಶಾಲೆಯ ಆಟಗಾರ ಪ್ರಣವ್ 116 ವರ್ಷಗಳ ಹಿಂದಿನ ದಾಖಲೆ ಉಡೀಸ್ ಮಾಡಿದ್ದಾನೆ. ಶಾಲಾ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಇಂಗ್ಲೆಂಡಿನ ಎಇಜಿ ಕಾಲಿನ್ಸ್ ಹೆಸರಿನಲ್ಲಿತ್ತು.

1899ರಲ್ಲಿ ಇಂಗ್ಲೆಂಡಿನ ಎಇಜಿ ಕಾಲಿನ್ಸ್ ಔಟಾಗದೇ 628 ರನ್ ಗಳಿಸಿದ್ದರು. ಸಚಿನ್, ಲಾರಾ, ಕ್ರಿಸ್ ಗೇಲ್ ದಾಖಲೆಗಳನ್ನು ಪ್ರಣವ್ ಪುಡಿಗಟ್ಟುವ ಮೂಲಕ ಮುಂದಿನ ದಿನಗಳಲ್ಲಿ ಭರವಸೆಯ ಆಟಗಾರನಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣವನ್ನು ಪ್ರಣವ್ ತೋರಿಸಿದ್ದಾನೆ. ಪ್ರಣವ್ ಧನವಾಡೆ ತಂದೆ ಮುಂಬೈನಲ್ಲಿ ಆಟೋ ಚಾಲಕ. ಆದರೆ ಬಾಲ್ಯದಿಂದಲೂ ಪ್ರಣವ್‌ಗೆ ಕ್ರಿಕೆಟ್ ಮೇಲೆ ಅತೀವ ಮೋಹ. 

ವೆಬ್ದುನಿಯಾವನ್ನು ಓದಿ