ಫೇವರಿಟ್ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ ಇಂದು ವಿಶ್ವ ಟಿ 20 ಸೆಮಿಫೈನಲ್

ಬುಧವಾರ, 30 ಮಾರ್ಚ್ 2016 (17:05 IST)
ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಏಕಮಾತ್ರ ತಂಡ ನ್ಯೂಜಿಲೆಂಡ್  ಇಂಗ್ಲೆಂಡ್ ವಿರುದ್ಧ ವಿಶ್ವ ಟ್ವೆಂಟಿ 20 ಸೆಮಿಫೈನಲ್‌‌ನಲ್ಲಿ ನೆಚ್ಚಿನ ತಂಡವಾಗಿ ಇಂದು ಆಡಲಿದೆ. ಕಿವೀಸ್ ಎಲ್ಲಾ 4 ಗ್ರೂಪ್ ಪಂದ್ಯಗಳನ್ನು ನಿರಾಯಾಸವಾಗಿ ಗೆದ್ದಿದ್ದು, ಆಸೀಸ್ ಮಾತ್ರ ಸ್ವಲ್ಪ ಹೋರಾಟ ನೀಡಿ 8 ರನ್ ಅಂತರದಿಂದ ಸೋತಿದೆ.
 
ನ್ಯೂಜಿಲೆಂಡ್ ಬ್ಯಾಟಿಂಗ್ ಪ್ರಬಲವೆಂದು ಹೇಳಲಾಗುತ್ತಿದ್ದರೂ ಸಾಮರ್ಥ್ಯಕ್ಕೆ ತಕ್ಕಹಾಗೆ ಇಲ್ಲ. ಪಾಕ್ ವಿರುದ್ಧ ಮಾತ್ರ  5 ವಿಕೆಟ್‌ಗೆ 180 ರನ್ ಸ್ಕೋರ್ ಮಾಡಿದ್ದರು. ಆದರೆ ಅವರ ಬೌಲಿಂಗ್ ಬಲಿಷ್ಠವಾಗಿದೆ. ಎಡಗೈ ಸ್ಪಿನ್ನರ್ ಮಿಚೆಲ್ ಸಾಂಟ್ನರ್ ಮತ್ತು ಲೆಗ್ ಬ್ರೇಕ್ ಬೌಲರ್ ಇಂದರ್ ಬೀರ್ ಸಿಂಗ್ ಸೋಧಿ ಭಾರತದ ಪಿಚ್ ಪರಿಸ್ಥಿತಿಯಲ್ಲಿ ಉತ್ತಮ ಸಾಧನೆ ಮಾಡಿದ್ದು ತಲಾ 9 ಮತ್ತು 8 ವಿಕೆಟ್ ಕಬಳಿಸಿದ್ದಾರೆ. 
 
ಕಿವೀಸ್  ತನ್ನ ಮುಂಚೂಣಿ ವೇಗಿಗಳಾದ ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌತಿಯನ್ನು ಇನ್ನೂ ಕಣಕ್ಕೆ ಇಳಿಸಿಲ್ಲ. ಕಿವೀಸ್ ಈ ವೇಗಿಗಳನ್ನು ಕಣಕ್ಕಿಳಿಸಿದರೆ, ಕೋಟ್ಲಾ ವಿಕೆಟ್‌ನಲ್ಲಿ ಅವರು ಅಪಾಯಕಾರಿಯಾಗಿ ಪರಿಣಮಿಸಬಹುದು. ನ್ಯೂಜಿಲೆಂಡ್ ಬೌಲಿಂಗ್ ಬಲವನ್ನು ಭಾರತ ಮತ್ತು ಬಾಂಗ್ಲಾ ವಿರುದ್ಧ ಪಂದ್ಯಗಳಿಂದ ಅಳೆಯಬಹುದು.  ಭಾರತವನ್ನು 79 ರನ್‌ಗಳಿಗೆ ಮತ್ತು ಬಾಂಗ್ಲಾವನ್ನು ಕೇವಲ 70 ರನ್‌ಗಳಿಗೆ ಅದು ಮಣಿಸಿತ್ತು.
 
 ಇಂಗ್ಲೆಂಡ್ ಫಿರೋಜ್ ಶಾ ಕೋಟ್ಲಾದ ಪಿಚ್‌ನಲ್ಲಿ ಕಠಿಣ ಪರೀಕ್ಷೆಯನ್ನು ಎದುರಿಸುವುದೆಂದು ನಿರೀಕ್ಷಿಸಲಾಗಿದೆ. ಕ್ರಿಸ್ ಗೇಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ ಆರಂಭದ ಪಂದ್ಯವನ್ನು ಸೋತರೂ, ಬಳಿಕ ಚೇತರಿಸಿಕೊಂಡು ಉಳಿದ ಮೂರೂ ಪಂದ್ಯಗಳನ್ನು ಗೆದ್ದಿತು. 
 
 ಇಂಗ್ಲೆಂಡ್ ಮುಖ್ಯ ಸಮಸ್ಯೆ ಸ್ಥಿರತೆಯ ಕೊರತೆ. ಲಿಲಿಪುಟ್ ಆಫ್ಘಾನಿಸ್ತಾನ ವಿರುದ್ಧ ಅವರ ಬ್ಯಾಟಿಂಗ್ ತೊಂದರೆಗೆ ಸಿಲುಕಿ 85ಕ್ಕೆ 7ವಿಕೆಟ್ ಒಂದು ಹಂತದಲ್ಲಿ  ಕಳೆದುಕೊಂಡಿತ್ತು. ಮೊಯಿನ್ ಅಲಿ ಕೊನೆಗೆ ಇಂಗ್ಲೆಂಡ್ ತಂಡವನ್ನು ಸೋಲಿನಿಂದ ಪಾರು ಮಾಡಿದರು. 

ವೆಬ್ದುನಿಯಾವನ್ನು ಓದಿ