ವಿಶ್ವ ಟಿ 20: ಭಾರತ ಉತ್ತಮ ಫಾರಂನಲ್ಲಿ, ಆದರೆ ಇತಿಹಾಸ ವಿಂಡೀಸ್ ಕಡೆ ಬೊಟ್ಟು

ಗುರುವಾರ, 31 ಮಾರ್ಚ್ 2016 (13:48 IST)
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ವಿಶ್ವ ಕಪ್ ಪಂದ್ಯಗಳ ಹಣಾಹಣಿಯಲ್ಲಿ  1983ಕ್ಕೆ ಹಿನ್ನೋಟ ಹರಿಸಿದಾಗ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ದೈತ್ಯ ವಿಂಡೀಸ್ ತಂಡವನ್ನು ಸೋಲಿಸಿದ್ದನ್ನು ನೆನಪಿಸುತ್ತದೆ. 2007ರಲ್ಲಿ  ಟೀಂ ಇಂಡಿಯಾದ ನಾಯಕತ್ವದ ಏಣಿಯಲ್ಲಿ ಪುಟ್ಟ ಹೆಜ್ಜೆಗಳನ್ನು ಇರಿಸಿದ್ದ ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ದ.ಆಫ್ರಿಕಾದಲ್ಲಿ ವಿಶ್ವ ಟ್ವೆಂಟಿ 20 ಪ್ರಶಸ್ತಿ ಗಳಿಸುವುದಕ್ಕೆ ಮಾರ್ಗದರ್ಶನ ನೀಡಿದ್ದರು. ಅದೇ ಧೋನಿ ಇನ್ನಷ್ಟು ಪಕ್ವರಾದ ಮೇಲೆ ವಾಂಖೆಡೆ ಕ್ರೀಡಾಂಗಣದಲ್ಲಿ ಕುಲಶೇಖರ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಐಸಿಸಿ ವಿಶ್ವ ಕಪ್ 2011ನ್ನು ಗೆದ್ದು ಕೊಟ್ಟಿದ್ದರು. 
 
 ಈಗ ಇವೆರಡೂ ತಂಡಗಳು ಪರಸ್ಪರ 2016ರ ವಿಶ್ವ ಟಿ 20ಯಲ್ಲಿ ವೆಸ್ಟ್ ಇಂಡೀಸ್ ಡೆರೆನ್ ಸಾಮಿ ನಾಯಕತ್ವದಲ್ಲಿ ಸೆಮಿಫೈನಲ್ಸ್‌ನಲ್ಲಿ ಎದುರುಬದುರಾಗಿದೆ. 
ಭಾರತ ಮತ್ತು ವೆಸ್ಟ್ ಇಂಡೀಸ್ ವಿಶ್ವ ಟಿ 20ಯಲ್ಲಿ ಮೂರು ಬಾರಿ ಸಂಧಿಸಿವೆ. ವಿಂಡೀಸ್ 2-1ರಲ್ಲಿ ಮೇಲುಗೈ ಸಾಧಿಸುವ ಮೂಲಕ ಇತಿಹಾಸವು ವೆಸ್ಟ್ ಇಂಡೀಸ್ ತಂಡಕ್ಕೆ ಬೆಂಬಲಿಸಿದೆ.
 
ಐಸಿಸಿ ವಿಶ್ವ ಟ್ವೆಂಟಿ 20 2009: ವಿಶ್ವ ಟಿ 20 2009ನೇ ಆವೃತ್ತಿಯಲ್ಲಿ ವೆಸ್ಟ್ ಇಂಡೀಸ್ ಪ್ರಾಬಲ್ಯ ಮತ್ತೆ ಕಂಡುಬಂತು. ಟೀಂ ಇಂಡಿಯಾ ನಾಯಕ ಧೋನಿ ಟಾಸ್ ಗೆದ್ದು ಕ್ರಿಸ್ ಗೇಲ್ ವೆಸ್ಟ್ ಇಂಡೀಸ್‌ಗೆ ಬ್ಯಾಟಿಂಗ್ ಅವಕಾಶ ನೀಡಿದರು. ಭಾರತ 7 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು. 
 
 ಇದಕ್ಕೆಉತ್ತರವಾಗಿ ಸಿಮ್ಮನ್ಸ್ 44 ಮತ್ತು ಬ್ರೇವೋ 66 ರನ್ ನೆರವಿನಿಂದ ವೆಸ್ಟ್ ಇಂಡೀಸ್ ಏಳುವಿಕೆಟ್ ಜಯ ಗಳಿಸಿತು. ಬ್ರೇವೋ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಪಾತ್ರರಾದರು. 
 ಐಸಿಸಿ ವಿಶ್ವ ಟಿ 20 2010: 
ಓಪನರ್ ಕ್ರಿಸ್ ಗೇಲ್ 66 ಎಸೆತಗಳಲ್ಲಿ ಬಿರುಸಿನ 98 ರನ್ ಸಿಡಿಸಿ ರನ್ ಔಟ್‌ ಆದರು. ನೆಹ್ರಾ ಬಿಗಿ ಬೌಲಿಂಗ್‌ನಿಂದ ಮೂರು ವಿಕೆಟ್ ಕಬಳಿಸಿದರು. ಆದರೂ ವೆಸ್ಟ್ ಇಂಡೀಸ್ 169 ರನ್ ಗಳಿಸಲು ಶಕ್ತವಾಯಿತು. ಇದಕ್ಕೆ ಉತ್ತರವಾಗಿ ಭಾರತ 155ರನ್ ಗಳಿಸಲು ಮಾತ್ರ ಸಾಧ್ಯವಾಗಿ ವೆಸ್ಟ್ ಇಂಡೀಸ್ 14 ರನ್‌ಗಳಿಂದ ಗೆದ್ದಿದೆ. 
ಐಸಿಸಿ ವಿಶ್ವ ಟಿ 20 2014: ಮಿರ್‌ಪುರದ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಮತ್ತು ಅಮಿತ್ ಮಿಶ್ರಾ ಅವರ ಮನೋಜ್ಞ ಸ್ಪಿನ್ ದಾಳಿಗೆ ವೆಸ್ಟ್ ಇಂಡೀಸ್ 129 ರನ್ ಮಾತ್ರ ಗಳಿಸಿತು. ಇದಕ್ಕೆ ಪ್ರತಿಯಾಗಿ ರೋಹಿತ್ ಶರ್ಮಾ ಅಜೇಯ 62 ಮತ್ತು ವಿರಾಟ್ ಕೊಹ್ಲಿ 53 ರನ್ ಗಳಿಸಿ ಭಾರತಕ್ಕೆ 7 ವಿಕೆಟ್ ಸರಾಗ ಜಯ ತಂದಿತ್ತರು. 

ವೆಬ್ದುನಿಯಾವನ್ನು ಓದಿ