WPL: ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಗೆ ಭರ್ಜರಿ ಗೆಲುವು
ಹರ್ಮ್ ಪ್ರೀತ್ ಕೌರ್ ಅಬ್ಬರದ ಅರ್ಧಶತಕ (65) ಮತ್ತು ಅಮೇಲಿಯಾ ಕೇರ್ (45) ಬಿರುಸಿನ ಬ್ಯಾಟಿಂಗ್ ನಿಂದಾಗಿ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 207 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಗುಜರಾತ್ ಕೊಂಚವೂ ಪ್ರತಿರೋಧ ತೋರದೇ 64 ರನ್ ಗಳಿಗೆ ಆಲೌಟ್ ಆಗುವ ಮೂಲಕ 143 ರನ್ ಗಳ ಹೀನಾಯ ಸೋಲುಂಡಿತು. ನಾಯಕಿ ಮೂನಿ ಖಾತೆ ತೆರೆಯುವ ಮೊದಲೇ ಗಾಯಗೊಂಡು ನಿವೃತ್ತಿಯಾದರು. ಉಳಿದಂತೆ ಅಗ್ರ ಕ್ರಮಾಂಕದ ಇಬ್ಬರು ಬ್ಯಾಟಿಗರು ಸತತವಾಗಿ ಶೂನ್ಯಕ್ಕೆ ಔಟಾದರು. ದಯಾಳನ್ ಹೇಮಲತಾ 29 ರನ್, ಮೋನಿಕಾ ಪಟೇಲ್ 10 ರನ್ ಗಳಿಸಿದ್ದು ಬಿಟ್ಟರೆ ಉಳಿದವರೆಲ್ಲರದ್ದೂ ಏಕಂಕಿ ಸಾಧನೆ. ಅಂತಿಮವಾಗಿ ಗುಜರಾತ್ 15.1 ಓವರ್ ಗಳಲ್ಲಿ 64 ರನ್ ಗಳಿಗೆ ಆಲೌಟ್ ಆಯಿತು. ಹರ್ಮನ್ ಪ್ರೀತ್ ಕೌರ್ ಪಂದ್ಯಶ್ರೇಷ್ಠರಾದರು.