ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ಫಿಟ್ನೆಸ್ ಮೇಲೆ ಅನುಮಾನ

ಶನಿವಾರ, 4 ಮಾರ್ಚ್ 2023 (10:10 IST)
ಮುಂಬೈ: ಮಹಿಳಾ ಐಪಿಎಲ್ ನ ಚೊಚ್ಚಲ ಆವೃತ್ತಿಗೆ ಇಂದಿನಿಂದ ಚಾಲನೆ ಸಿಗುತ್ತಿದೆ. ಈ ನಡುವೆ ರಾಯಲ್ ಚಾಲೆಂಜರ್ಸ್ ನಾಯಕಿ ಸ್ಮೃತಿ ಮಂಧನಾ ಫಿಟ್ನೆಸ್ ಮೇಲೆ ನೆಟ್ಟಿಗರಿಗೆ ಅನುಮಾನ ಮೂಡಿದೆ.

ಸ್ಮೃತಿ ತಂಡಕ್ಕೆ ಆಗಮಿಸುತ್ತಿರುವ ವಿಡಿಯೋವನ್ನು ಆರ್ ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿತ್ತು. ಬಳಿಕ ಆರ್ ಸಿಬಿ ಜೆರ್ಸಿಯಲ್ಲಿ ಸ್ಮೃತಿ ಫೋಟೋ ಶೂಟ್ ನ ಕ್ಷಣಗಳನ್ನೂ ಪ್ರಕಟಿಸಿತ್ತು. ಈ ಎರಡೂ ವೇಳೆ ಸ್ಮೃತಿ ಎಡಗೈ ಬೆರಳುಗಳಿಗೆ ಬ್ಯಾಂಡೇಜ್ ಸುತ್ತಿಕೊಂಡಿತ್ತು.

ಆರ್ ಸಿಬಿ ಅಭ್ಯಾಸದಲ್ಲಿ ಎಲ್ಲಾ ಆಟಗಾರರೂ ಅಭ್ಯಾಸ ನಡೆಸುತ್ತಿರುವ ಫೋಟೋ ಪ್ರಕಟಿಸಿದರೂ ಸ್ಮೃತಿ ಅಭ್ಯಾಸದ ಕ್ಷಣಗಳನ್ನು ಆರ್ ಸಿಬಿ ಪ್ರಕಟಿಸಿರಲಿಲ್ಲ. ಹೀಗಾಗಿ ಸ್ಮೃತಿ ಕೈ ಬೆರಳಿಗೆ ಗಾಯವಾಗಿರಬಹುದು ಎಂಬ ಅನುಮಾನ ಅಭಿಮಾನಿಗಳಿಗೆ ಕಾಡಿದೆ. ನಾಳೆ ಆರ್ ಸಿಬಿ ಮೊದಲ ಪಂದ್ಯವಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ