ಡಬ್ಲ್ಯುಪಿಎಲ್: ಹೋರಾಡಿದರೂ ಆರ್ ಸಿಬಿಗೆ ಹ್ಯಾಟ್ರಿಕ್ ಸೋಲು ತಪ್ಪಲಿಲ್ಲ

ಗುರುವಾರ, 9 ಮಾರ್ಚ್ 2023 (08:30 IST)
Photo Courtesy: Twitter
ಮುಂಬೈ: ಡಬ್ಲ್ಯುಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರು ಕೊನೆಗೂ ಗೆಲುವಿನ ಖಾತೆ ತೆರೆಯಲೇ ಇಲ್ಲ.

ಗುಜರಾತ್ ಜೈಂಟ್ಸ್ ವಿರುದ್ಧ ನಿನ್ನೆಯ ಪಂದ್ಯದಲ್ಲೂ ಆರ್ ಸಿಬಿ 11 ರನ್ ಗಳ ಸೋಲು ಅನುಭವಿಸಿದೆ. ಬೌಲಿಂಗ್ ನಲ್ಲಿ ಮತ್ತೆ ಕಳಪೆ ಪ್ರದರ್ಶನ ನೀಡಿದ ಆರ್ ಸಿಬಿಯಿಂದಾಗಿ ಗುಜರಾತ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕಿ ಸ್ಮೃತಿ ಮಂಧನಾ 18 ರನ್ ಗಳಿಗೆ ಔಟಾದರೂ ಇನ್ನೊಬ್ಬ ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ 45 ಎಸೆತಗಳಿಂದ 66 ರನ್ ಗಳಿಸಿ ಔಟಾದರು. ಇದು ಡಬ್ಲ್ಯುಪಿಎಲ್ ನಲ್ಲಿ ಆರ್ ಸಿಬ ಪರ ದಾಖಲಾದ ಮೊದಲ ಅರ್ಧಶತಕ. ಅವರಿಗೆ ಎಲ್ಸೆ ಪೆರಿ ತಕ್ಕ ಸಾಥ್ ನೀಡಿದರಾದರೂ ಅವರ ಆಟ 32 ರನ್ ಗಳಿಗೆ ಕೊನೆಗೊಂಡಿತು. ಅಂತಿಮ ಹಂತದಲ್ಲಿ ಹೀದರ್ ನೈಟ್ 11 ಎಸೆತಗಳಿಂದ ಅಜೇಯ 30 ರನ್ ಚಚ್ಚಿದರೂ ಇದು ಗೆಲುವಿಗೆ ಸಹಾಯ ಮಾಡಲಿಲ್ಲ. ಇದರೊಂದಿಗೆ ಆರ್ ಸಿಬಿ ಗೆಲುವಿನ ಕನಸು ಭಗ್ನವಾಯಿತು. ಗುಜರಾತ್ ಮೊದಲ ಗೆಲುವಿನ ಖುಷಿ ಅನುಭವಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ