ಡಬ್ಲ್ಯುಪಿಎಲ್: ಕೊನೆಗೂ ಆರ್ ಸಿಬಿಗೆ ಸಿಕ್ಕಿತ್ತು ಮೊದಲ ಗೆಲುವು

ಗುರುವಾರ, 16 ಮಾರ್ಚ್ 2023 (08:30 IST)
ಮುಂಬೈ: ಡಬ್ಲ್ಯುಪಿಎಲ್ ಕೂಟದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್ ಸಿಬಿಗೆ ಕೊನೆಗೂ ಗೆಲುವಿನ ಸಿಹಿ ಸಿಕ್ಕಿದೆ. ಯುಪಿ ವಾರಿಯರ್ಸ್ ವಿರುದ್ಧ ಆರ್ ಸಿಬಿ 5 ವಿಕೆಟ್ ಗಳ ಗೆಲುವು ಸಂಪಾದಿಸಿದೆ.
 

ನಿನ್ನೆ ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ 19.3 ಓವರ್ ಗಳಲ್ಲಿ 135 ರನ್ ಗೆ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿದ ಆರ್ ಸಿಬಿ 18 ಓವರ್ ಗಳಲ್ಲಿ 5 ವಿಕೆಟ್ ಗೆ 136 ರನ್ ಗಳಿಸಿ ಮೊದಲ ಗೆಲುವಿನ ಸಂಭ್ರಮ ಪಡೆದುಕೊಂಡಿತು.

ಆರಂಭದಲ್ಲಿಯೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾದ ಆರ್ ಸಿಬಿಗೆ ನೆರವಾಗಿದ್ದು ಕನಿಕಾ ಅಹುಜಾ. 30 ಎಸೆತಗಳಿಂದ 46 ರನ್ ಸಿಡಿಸಿದ ಕನಿಕಾ ಆರ್ ಸಿಬಿ ಗೆಲುವನ್ನು ಖಾತ್ರಿಗೊಳಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ರಿಚಾ ಘೋಷ್ 31 ರನ್ ಗಳ ಕಾಣಿಕೆ ನೀಡಿದರು. ಹೀದರ್ ನೈಟ್ 24 ರನ್ ಗಳಿಸಿದರು. ನಾಯಕಿ ಸ್ಮೃತಿ ಮಂಧನಾ ಶೂನ್ಯಕ್ಕೆ ಔಟಾಗುವ ಮೂಲಕ ಮತ್ತೆ ಬ್ಯಾಟಿಂಗ್ ಬರಗಾಲ ಮುಂದುವರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ