ಕೊಹ್ಲಿಗೆ ಅನಾರೋಗ್ಯವಿತ್ತು ಎಂದಿದ್ದ ಪತ್ನಿ ಅನುಷ್ಕಾ: ಇಲ್ಲ ಎಂದ ರೋಹಿತ್ ಶರ್ಮಾ!

ಬುಧವಾರ, 15 ಮಾರ್ಚ್ 2023 (08:50 IST)
ಅಹಮ್ಮದಾಬಾದ್: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಶತಕ ಸಿಡಿಸಿದ ಬಳಿಕ ಪತ್ನಿ ಅನುಷ್ಕಾ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ಅನಾರೋಗ್ಯವಿದ್ದರೂ ಆಡಿದ್ದರು ಎಂದಿದ್ದರು.

ಹೀಗಾಗಿ ಕೊಹ್ಲಿ ಅನಾರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಆತಂಕವಾಗಿತ್ತು. ಅನುಷ್ಕಾ ಹೇಳಿಕೆ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಗೆ ಕೊಹ್ಲಿ ಮೇಲಿನ ಗೌರವ, ಅಭಿಮಾನ ಇನ್ನಷ್ಟು ಹೆಚ್ಚಾಗಿತ್ತು.

ಆದರೆ ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ ‘ಅವರಿಗೆ ಅನಾರೋಗ್ಯವಿತ್ತು ಎಂದು ನನಗೆ ಅನಿಸುತ್ತಿಲ್ಲ. ಸ್ವಲ್ಪ ಕೆಮ್ಮುತ್ತಿದ್ದರಷ್ಟೇ, ಬೇರೇನೂ ಸಮಸ್ಯೆಯಿರಲಿಲ್ಲ’ ಎಂದಿದ್ದರು. ರೋಹಿತ್ ಈ ಹೇಳಿಕೆ ನೀಡಿದ ಮೇಲೆ ಅನುಷ್ಕಾರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಅನುಷ್ಕಾ ಪತಿಯ ಮೇಲೆ ಎಷ್ಟು ಕಾಳಜಿ ಹೊಂದಿದ್ದಾರೆ. ಜಸ್ಟ್ ಕೆಮ್ಮಿದ್ದಕ್ಕೆ ಹುಷಾರಿಲ್ಲ ಎಂದು ಗಾಬರಿಯಾದರು. ಟಿಪಿಕಲ್ ಭಾರತೀಯ ನಾರಿ ಎಂದು ತಮಾಷೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ