WTC Finals: ನಾಲ್ಕನೇ ದಿನದಾಟ ಮಳೆಗೆ ರದ್ದು

ಮಂಗಳವಾರ, 22 ಜೂನ್ 2021 (09:12 IST)
ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ನಾಲ್ಕನೇ ದಿನದಾಟ ಮಳೆಗೆ ರದ್ದಾಗಿದೆ.


ಭಾರತೀಯ ಕಾಲಮಾನ ಪ್ರಕಾರ ಸಂಜೆ 7 ರ ವೇಳೆಗೆ ಮತ್ತಷ್ಟು ಬಿರುಸಾಗಿ ಮಳೆ ಆರಂಭವಾಯಿತು. ದಿನವಿಡೀ ಮಳೆ ಸುರಿದಿದ್ದರಿಂದ ಮೈದಾನವಿಡೀ ಒದ್ದೆಯಾಗಿದೆ. ಹೀಗಾಗಿ ನಾಲ್ಕನೇ ದಿನದಾಟವನ್ನು ರದ್ದುಗೊಳಿಸಲಾಯಿತು.

ಮೊದಲ ಇನಿಂಗ್ಸ್ ನಲ್ಲಿ ಭಾರತ 217 ರನ್ ಗಳಿಗೆ ಆಲೌಟ್ ಆಗಿತ್ತು. ಮೂರನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ