ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಮತ್ತೆ ಮಳೆ ಅಡ್ಡಿಯಾಗಿದೆ.
ನಾಲ್ಕನೇ ದಿನದ ಮೊದಲ ಅವಧಿ ಮಳೆಗೆ ಆಹುತಿಯಾಗಿದೆ. ಈಗಾಗಲೇ ಮೊದಲ ದಿನವಿಡೀ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ದಿನ ಮಂದ ಬೆಳಕಿನಿಂದಾಗಿ ಬೇಗನೇ ದಿನದಾಟ ಮುಗಿಸಲಾಗಿತ್ತು.
ನಿನ್ನೆಯ ದಿನದಂತ್ಯಕ್ಕೆ ಕಿವೀಸ್ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿ ದಿನದಾಟ ಮುಗಿಸಿತ್ತು. ಇದೀಗ ಮಳೆ ಬಿಟ್ಟಿದ್ದು, ಸ್ವಲ್ಪ ಹೊತ್ತಿನಲ್ಲೇ ಪಂದ್ಯ ಆರಂಭವಾಗುವ ನಿರೀಕ್ಷೆಯಿದೆ.