WTC Finals: ನ್ಯೂಜಿಲೆಂಡ್ ಗೆ ಕಡಿವಾಣ ಹಾಕುವ ಯತ್ನದಲ್ಲಿ ಟೀಂ ಇಂಡಿಯಾ

ಸೋಮವಾರ, 21 ಜೂನ್ 2021 (08:54 IST)
ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 217 ಕ್ಕೆ ಆಲೌಟ್ ಆಗಿದೆ.


ನಿನ್ನೆಯ ದಿನವಿಡೀ ಕಿವೀಸ್ ಬೌಲರ್ ಗಳು ಮೇಲುಗೈ ಸಾಧಿಸಿದ್ದರು. ಜೆಮಿಸನ್ 5 ವಿಕೆಟ್ ಕಿತ್ತು ಮಿಂಚಿದರು.  ಅಂತಿಮವಾಗಿ ಭಾರತ ಕೇವಲ 217 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಮೊತ್ತ ಬೆನ್ನತ್ತಿದ ಕಿವೀಸ್ ಆರಂಭ ಉತ್ತಮವಾಗಿತ್ತು. ಚಹಾ ವಿರಾಮದವರೆಗೂ ಯಾವುದೇ ವಿಕೆಟ್ ಕಳೆದಕೊಂಡಿರಲಿಲ್ಲ. ಆದರೆ ತಂಡದ ಮೊತ್ತ 70 ರನ್ ಗಳಾಗಿದ್ದಾಗ 30 ರನ್ ಗಳಿಸಿದ್ದ ಟಾಮ್ ಲಥಮ್ ರವಿಚಂದ್ರನ್ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ 54 ರನ್ ಗಳಿಸಿದ್ದ ಇನ್ನೊಬ್ಬ ಆರಂಭಿಕ ಡೆವೊನ್ ಕೊನ್ವೇ ಇಶಾಂತ್ ಶರ್ಮಾಗೆ ವಿಕೆಟ್ ನೀಡಿದರು. ಇದರಿಂದಾಗಿ ಭಾರತ ದಿನದಂತ್ಯಕ್ಕೆ ಕೊಂಚ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಯಿತು. ಅಂತಿಮವಾಗಿ ನ್ಯೂಜಿಲೆಂಡ್ ನಿನ್ನೆಯ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತ್ತು. ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನೂ 116 ರನ್ ಗಳಿಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ