ರೋ’ಹಿಟ್’, ‘ಯಶಸ್ವಿ’ ಜೈಸ್ವಾಲ್ ಶತಕಕ್ಕೆ ಯಾವೆಲ್ಲಾ ದಾಖಲೆಗಳು ಧೂಳೀಪಟ?

ಶುಕ್ರವಾರ, 14 ಜುಲೈ 2023 (08:20 IST)
ಡೊಮಿನಿಕಾ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಗರ ಅಬ್ಬರ ಮುಂದುವರಿದಿದೆ. ಎರಡನೇ ದಿನದಾಟದಲ್ಲಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಶತಕ ಹೈಲೈಟ್ ಆಗಿತ್ತು.

ಎರಡನೇ ದಿನದಾಟಕ್ಕೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿತ್ತು. ವಿಂಡೀಸ್ ಮೊದಲ ಇನಿಂಗ್ಸ್ ನಲ್ಲಿ 150 ರನ್ ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ ಭಾರತ 162 ರನ್ ಗಳ ಮುನ್ನಡೆ ಪಡೆದಿದೆ. ಇದೀಗ ಕ್ರೀಸ್ ನಲ್ಲಿ 143 ರನ್ ಗಳಿಸಿರುವ ಜೈಸ್ವಾಲ್ ಮತ್ತು 36 ರನ್ ಗಳಿಸಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ನಿನ್ನೆಯ ದಿನದಾಟದಲ್ಲಿ ರೋಹಿತ್, ಯಶಸ್ವಿ ಜೈಸ್ವಾಲ್ ಶತಕ ಹೈಲೈಟ್. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ನಾಲ್ಕನೇ ಅತ್ಯಂತ ಕಿರಿಯ ಬ್ಯಾಟಿಗ ಎಂಬ ದಾಖಲೆ ಮಾಡಿದರು. ಪೃಥ್ವಿ ಶಾ, ಶಿಖರ್ ಧವನ್ ಬಳಿಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಮೂರನೇ ಬ್ಯಾಟಿಗ ಎನಿಸಿಕೊಂಡರು. ರೋಹಿತ್-ಜೈಸ್ವಾಲ್ 229 ರನ್ ಗಳ ಜೊತೆಯಾಟವಾಡಿದರು. ಇದು ಏಷ್ಯಾದ ಹೊರಗೆ ಭಾರತದ ಪರ ಅತ್ಯಂತ ದೊಡ್ಡ ಜೊತೆಯಾಟವಾಗಿದೆ. ನಾಯಕ ರೋಹಿತ್ ಶರ್ಮಾಗೆ ಇದು 10 ನೇ ಟೆಸ್ಟ್ ಶತಕವಾಗಿತ್ತು. ವಿಂಡೀಸ್ ನಲ್ಲಿ ರೋಹಿತ್ ಮೊದಲ ಟೆಸ್ಟ್ ಶತಕ ಇದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ