ನಾಯಕ ಮಿಷಬ್ ಉಲ್ ಹಕ್ ಅಜೇಯ 59 ರನ್ ಗಳಿಸಿ ಜೆಹಾನ್ ಮುಬಾರಕ್ ಬೌಲಿಂಗ್ನಲ್ಲಿ ಗೆಲುವಿನ ಸಿಕ್ಸರ್ ಬಾರಿಸುವ ಮೂಲಕ ಶ್ರೀಲಂಕಾದಲ್ಲಿ ಸತತ ಮೂರು ಸೋಲಿನ ಸರಣಿಗಳಿಗೆ ತೆರೆಎಳೆದರು. ಪಾಕಿಸ್ತಾನ ಶ್ರೀಲಂಕಾದಲ್ಲಿ 2009, 2012 ಮತ್ತು 2014ರಲ್ಲಿ ಸತತವಾಗಿ ಸೋಲನುಭವಿಸಿತ್ತು.
ಶ್ರೀಲಂಕಾ ನೆಲದಲ್ಲಿ ಪ್ರವಾಸ ತಂಡವು ನಾಲ್ಕನೇ ಇನ್ನಿಂಗ್ಸ್ನಲ್ಲಿ 300 ರನ್ ಗಡಿದಾಟಿದ್ದು ಇದು ನಾಲ್ಕನೇ ಬಾರಿಯಾಗಿದೆ. ಪಾಕಿಸ್ತಾನದ ಪರ ಶಾನ್ ಮಸೂದ್ 125 ರನ್ ಬಾರಿಸಿದ್ದು, ಯೂನಿಸ್ ಖಾನ್ ಅಜೇಯ 171 ರನ್ ಮತ್ತು ಮಿಶಬ್ ಉಲ್ ಹಕ್ ಅಜೇಯ 59 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿದೆ.