ಟೀಂ ಇಂಡಿಯಾಗೆ ಮತ್ತೆ ಕಮ್‌ಬ್ಯಾಕ್ ಆಗಲು ಯುವಿ, ಜಹೀರ್ ನಿರ್ಧಾರ

ಬುಧವಾರ, 1 ಏಪ್ರಿಲ್ 2015 (10:20 IST)
ಐಪಿಎಲ್‌ನಲ್ಲಿ ಮನೋಜ್ಞ ಪ್ರದರ್ಶನದ ನಂತರ ಟೀಂ ಇಂಡಿಯಾಗೆ ಮತ್ತೆ ಕಮ್‌ಬ್ಯಾಕ್ ಆಗಬೇಕೆಂದು ಡೆಲ್ಲಿ ಡೇರ್‌ಡೆವಿಲ್ಸ್‌ನ ಯುವರಾಜ್ ಸಿಂಗ್ ಮತ್ತು ಜಹೀರ್ ಖಾನ್ ಆಶಿಸಿದ್ದಾರೆ. ಡೆಲ್ಲಿ  ಡೇರ್‌ಡೆವಿಲ್ಸ್  16 ಕೋಟಿ ರೂ. ಶುಲ್ಕಕ್ಕೆ ಯುವರಾಜ್ ಅವರನ್ನು ಖರೀದಿಸಿದ್ದು, ಡೆಲ್ಲಿ ತಂಡಕ್ಕೆ ಅದರ ಪ್ರತಿಫಲ ನೀಡಲು  ಯುವರಾಜ್ ನಿರ್ಧರಿಸಿದ್ದಾರೆ.

ನಾನು ಚಿಕಿತ್ಸೆಯಿಂದ ವಾಪಸು ಬಂದ ಬಳಿಕ ನನಗೆ ಕೆಲವು ಕಠಿಣ ವರ್ಷಗಳನ್ನು ಎದುರಿಸಿದ್ದೇನೆ. ನಾನು ಈಗ ಕಠಿಣ ಶ್ರಮ ವಹಿಸಿದ್ದು, ದೇಶೀ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ಈ ಸಲ ಕೂಡ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದ್ದು, ಟೀಂ ಇಂಡಿಯಾಗೆ ಮತ್ತೆ ಮರಳುತ್ತೇನೆ ಎಂದು ಯುವರಾಜ್ ಡೇರ್‌ಡೇವಿಲ್ಸ್ ಪ್ರಾಯೋಜಕರಾಗಿ ಡೈಕಿನ್ ಏರ್ ಕಂಡೀಷನಿಂಗ್ ಆಯ್ಕೆಯಾಗಿರುವ ಸಮಾರಂಭದಲ್ಲಿ ಹೇಳಿದ್ದಾರೆ. 
 
  ಜಹೀರ್ ಅವರನ್ನು ಡೆಲ್ಲಿ ಡೇರ್‌ಡೆವಿಲ್ಸ್ ಈ ಆವೃತ್ತಿಯಲ್ಲಿ ನಾಲ್ಕು ಕೋಟಿಗೆ ಖರೀದಿಸಿದೆ. ಕಳೆದ ವರ್ಷ ಮುಂಬೈ ಇಂಡಿಯನ್ಸ್ ಪರ ಆಡುವಾಗ ಗಾಯದಿಂದಾಗಿ ಮಧ್ಯದಲ್ಲಿಯೇ ಅವರು ಐಪಿಎಲ್‌ನಿಂದ ಹೊರಗುಳಿದಿದ್ದರು. 

ವೆಬ್ದುನಿಯಾವನ್ನು ಓದಿ