ಗಾಲ್ಫ್ ಆಟಗಾರರು ರಿಯೊದಿಂದ ಹಿಂದೆ ಸರಿಯಲು ನಿಜವಾದ ಕಾರಣ ಜೀಕಾ ವೈರಸ್ ಅಲ್ಲ

ಶುಕ್ರವಾರ, 22 ಜುಲೈ 2016 (17:29 IST)
ರಿಯೊ ಒಲಿಂಪಿಕ್ಸ್‌ನಿಂದ ನಾಲ್ವರು ಟಾಪ್ ಗಾಲ್ಫ್ ಆಟಗಾರರು ಹಿಂದೆ ಸರಿಯಲು ಜೀಕಾ ವೈರಸ್ ಭೀತಿ ನಿಜವಾದ ಕಾರಣವಲ್ಲ, ಬಹುಮಾನದ ಹಣವಿಲ್ಲದೇ ಇರುವುದರಿಂದ ಬರುತ್ತಿಲ್ಲ ಎಂದು ರಿಯೊ ಸಂಘಟನಾ ಸಮಿತಿ ಅಧ್ಯಕ್ಷ ಕಾರ್ಲೋಸ್ ನುಜ್‌ಮ್ಯಾನ್ ತಿಳಿಸಿದ್ದಾರೆ. ಅವರು ಜೀಕಾದ ವಿರುದ್ಧ ದೂರಲು ಯತ್ನಿಸಿದ್ದಾರೆ. ಆದರೆ ಬಹುಮಾನದ ಹಣದ ಕೊರತೆಯಿಂದಾಗಿ ಅವರು ಬರುತ್ತಿಲ್ಲ ಎಂದು ಕಾರ್ಲೋಸ್ ಹೇಳಿದರು.  

ರಿಯೊ ಕ್ರೀಡಾಕೂಟ ಆರಂಭಕ್ಕೆ ಮೂರು ವಾರಗಳು ಮಾತ್ರ ಬಾಕಿವುಳಿದಿರುವ ನಡುವೆ,  ಜೀಕಾ ವೈರಸ್ ಅಪಾಯವನ್ನು ಉದಾಹರಿಸಿ ಒಲಿಂಪಿಕ್ಸ್‌ನಲ್ಲಿ ಆಡಲು ನಿರಾಕರಿಸಿದ ಇತ್ತೀಚಿನ ಗಾಲ್ಫರ್ ಜೋರ್ಡಾನ್ ಸ್ಪೈತ್.  112 ವರ್ಷಗಳಲ್ಲೇ ಪ್ರಥಮ ಬಾರಿಗೆ ನಡೆಯುತ್ತಿರುವ ಒಲಿಂಪಿಕ್ ಗಾಲ್ಫ್ ಟೂರ್ನಿಗೆ ಜೀಕಾ ವೈರಸ್ ಅಪಾಯವನ್ನು ದೂರುತ್ತಿರುವ ಜಾಸನ್ ಡೇ, ಡಸ್ಟಿನ್ ಜಾನ್ಸನ್ ಮತ್ತು ರೋರಿ ಮೆಕ್ಲಾರಯ್ ಸಾಲಿಗೆ ಅವರು ಸೇರಿದರು.
 
ಜೀಕಾ ವೈಸರ್ ಬ್ರೆಜಿಲ್‌ಗಿಂತ ಫ್ಲೋರಿಡಾದಲ್ಲಿ ಭೀಕರವಾಗಿದೆ. ಆದರೂ ಗಾಲ್ಫರುಗಳು ಫ್ಲೋರಿಡಾದಲ್ಲಿ ಆಡುತ್ತಿಲ್ಲವೇ ಎಂದು ಕಾರ್ಲೋಸ್ ಪ್ರಶ್ನಿಸಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನಿಂದ ತಪ್ಪಿಸಿಕೊಳ್ಳಲು ಅಥ್ಲೀಟ್‌ಗಳು ಇನ್ನೂ ಕೆಲವು ಕಾರಣಗಳನ್ನು ನೀಡಿದ್ದಾರೆ. ಅವರು ಜಲಮಾಲಿನ್ಯ, ಭದ್ರತಾ ಆತಂಕಗಳು, ನೀರಸ ಟಿಕೆಟ್ ಮಾರಾಟ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ