ಪಾಕ್ ಕ್ರಿಕೆಟನ್ನು ಈಗಲೂ ಕಾಡುತ್ತಿರುವ ಸ್ಪಾಟ್ ಫಿಕ್ಸಿಂಗ್

ಸೋಮವಾರ, 29 ಆಗಸ್ಟ್ 2011 (15:45 IST)
ಸ್ಪಾಟ್ ಫಿಕ್ಸಿಂಗ್‌ ಪೆಂಡಭೂತ ಪಾಕಿಸ್ತಾನ ಕ್ರಿಕೆಟನ್ನು ಆವರಿಸಿ ಒಂದೇ ವರ್ಷವೇ ಸಂದರೂ ತಂಡ ಇನ್ನೂ ಚೇತರಿಸಿಕೊಂಡಿಲ್ಲ. ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಕರಿನೆರಳಿನಿಂದ ಇನ್ನೂ ಹೊರಬಂದಿಲ್ಲ ಎಂಬುದಂತೂ ಸತ್ಯ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕಳೆದ ವರ್ಷ ಇದೇ ಕಾಲಘಟ್ಟದಲ್ಲಿ ಬ್ರಿಟಿಷ್ ಟಾಬ್ಲಯ್ಡ್, ಅಂದಿನ ಪಾಕಿಸ್ತಾನ ತಂಡದ ಟೆಸ್ಟ್ ನಾಯಕ ಸಲ್ಮಾನ್ ಭಟ್ ಹಾಗೂ ವೇಗಿಗಳಾದ ಮೊಹಮ್ಮದ್ ಆಮೀರ್ ಮತ್ತು ಮೊಹಮ್ಮದ್ ಆಸಿಫ್ ಮೇಲೆ ಸ್ಪಾಟ್ ಫಿಕ್ಸಿಂಗ್ ಆರೋಪವನ್ನು ಹೊರಿಸಿತ್ತು.

ಇಡೀ ಲೋಕವನ್ನೇ ಬೆಚ್ಚಿ ಬೀಳಿಸಿದ ಈ ಘಟನೆಯು ವಿಶ್ವ ಕ್ರಿಕೆಟನ್ನೇ ತಲ್ಲಣಗೊಳಿಸಿತ್ತು. ಮ್ಯಾಚ್ ಫಿಕ್ಸಿಂಗ್‌ನ ನೂತನ ರೂಪವಾದ ಸ್ಪಾಟ್ ಫಿಕ್ಸಿಂಗ್ ನಡೆಸಿರುವುದು ಬೆಳಕಿಗೆ ಬಂದಿತ್ತು.

ಇಂಗ್ಲೆಂಡ್ ‌ವಿರುದ್ಧ ಲಾರ್ಡ್ಸ್ ಪಂದ್ಯದಲ್ಲಿ ಉದ್ದೇಶಪೂರ್ವಕವಾಗಿಯೇ ಆಮೀರ್ ಹಾಗೂ ಆಸಿಫ್ ನೊ ಬಾಲ್ ಎಸೆದಿದ್ದರು. ಎಲ್ಲವೂ ನಾಯಕ ಭಟ್ ಸೂಚಯಂತೆ ನಡೆದಿತ್ತೆಂಬ ವರದಿಯನ್ನು ಪತ್ರಿಕೆ ಬಿಡುಗಡೆ ಮಾಡಿತ್ತು. ಆನಂತರ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದರು.

ಮೂರನೇ ದಿನದಾಟದ ನಂತರ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಪೊಲೀಸರು ನಮ್ಮ ಕೊಠಡಿಗಳಿಗೆ ದಾಳಿ ನಡೆಸಿದ್ದರು ಎಂದು ಆಗಿನ ಪಾಕ್ ತಂಡದ ಮ್ಯಾನೇಜರ್ ಆಗಿದ್ದ ಯಾವರ್ ಸಯೀದ್ ಈಗಲೂ ಘಟನೆ ನೆನಪಿಸಿಕೊಳ್ಳುತ್ತಾರೆ.

ಆನಂತರ ವಿಚಾರಣೆ ನಡೆಸಿದ್ದ ಐಸಿಸಿ ಭ್ರಷ್ಟಾಚಾರ ನಿಗ್ರಹ ದಳವು ಭಟ್‌ ಅವರಿಗೆ ಹತ್ತು, ಆಸಿಫ್‌ಗೆ ಏಳು ಹಾಗೂ ಆಮೇರ್ ಅವರನ್ನು ಐದು ವರ್ಷಗಳಿಗೆ ಅಂತರಾಷ್ಟ್ರೀಯ ಸಹಿತ ಎಲ್ಲ ದರ್ಜೆಗಳ ಕ್ರಿಕೆಟ್‌ನಿಂದಲೂ ಅಮಾನತುಗೊಳಿಸಿತ್ತು.

ಉದಯೋನ್ಮುಖ ಬೌಲರ್ ಆಗಿದ್ದ ಆಮೀರ್ 19ರ ಹರೆಯದಲ್ಲೇ ತಮ್ಮ ಕೆರಿಯರನ್ನು ಹಾಳು ಮಾಡುವಂತಾಗಿತ್ತು. ಅಲ್ಲದೆ 30ರ ಅಸುಪಾಸಿನಲ್ಲಿರುವ ಆಸಿಫ್ ಮತ್ತು ಆಮೇರ್ ಕೆರೆಯರ್ ಬಹುತೇಕ ಅಂತ್ಯಗೊಂಡಿತ್ತು. ಒಟ್ಟಾರೆ ಘಟನೆಯಿಂದ ವಿಶ್ವ ಕ್ರಿಕೆಟ್‌ನಲ್ಲಿ ಪಾಕ್ ಕ್ರೀಡೆ ಭಾರಿ ಮುಖಭಂಗ ಅನುಭವಿಸುವಂತಾಗಿತ್ತು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ