ಮ್ಯಾಚ್ ಫಿಕ್ಸಿಂಗ್ ವರದಿಗಳನ್ನು ತಳ್ಳಿ ಹಾಕಿದ ಹರಭಜನ್

ಗುರುವಾರ, 12 ಮೇ 2011 (09:20 IST)
ಭಾರತೀಯ ಕ್ರಿಕೆಟಿಗರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆಂಬ ಮುನ್ನಡೆಯ ಮ್ಯಾಗಜೀನ್‌ವೊಂದರ ಆರೋಪಗಳನ್ನು ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ತಳ್ಳಿ ಹಾಕಿದ್ದು, ಈ ಬಗ್ಗೆ ಹೆಚ್ಚು ಹೇಳಿಕೆ ನೀಡಲು ನಿರಾಕರಿಸಿದ್ದಾರೆ.

ಯಾವುದೇ ಕಾಮೆಂಟ್ ನೀಡುತ್ತಿಲ್ಲ. ಒಂದು ವೇಳೆ ಅಗತ್ಯವಿದ್ದಲ್ಲಿ ಬಿಸಿಸಿಐ ಜತೆ ಮಾತನಾಡಲಿದ್ದೇನೆ. ಈ ಬಗ್ಗೆ ಹೆಚ್ಚು ಮಾತನಾಡಲು ಇಚ್ಛಿಸುತ್ತಿಲ್ಲ ಎಂದು ಭಜ್ಜಿ ತಿಳಿಸಿದ್ದಾರೆ.

ಭಾರತೀಯ ಕ್ರಿಕೆಟಿಗರು ಮೋಸದಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಕ್ರೀಡಾ ಮ್ಯಾಗಜೀನ್ ಆರೋಪ ಮಾಡಿತ್ತು. ಆದರೆ ಇಂತಹ ಮೂರ್ಖತನಕ್ಕೆ ಉತ್ತರ ನೀಡುವುದಿಲ್ಲ ಎಂದು 30ರ ಹರೆಯದ ಭಜ್ಜಿ ನುಡಿದಿದ್ದಾರೆ.

ಇದೇ ಸಂದರ್ಭದಲ್ಲಿ ಮುಂಬರುವ ವೆಸ್ಟ್‌ಇಂಡೀಸ್ ಸರಣಿಗೆ ತಾನು ಆಯ್ಕೆಗೆ ಲಭ್ಯರಿರುವುದಾಗಿ ಹರಭಜನ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ