ಯುವರಾಜ್ ಸ್ಫೋಟಕ ಬ್ಯಾಟಿಂಗ್, ಅಶ್ವಿನ್ ಮಾರಕ ಸ್ಪಿನ್: ಸೋಲಪ್ಪಿದ ಆಸ್ಟ್ರೇಲಿಯಾ

ಸೋಮವಾರ, 31 ಮಾರ್ಚ್ 2014 (16:13 IST)
PR
PR
ಮಿರ್‌ಪುರ: ಭಾನುವಾರ ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಯುವರಾಜ್ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಅಶ್ವಿನ್ ಮಾರಕ ಸ್ಪಿನ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಟಿ ಟ್ವೆಂಟಿ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಸೋಲನುಭವಿಸಿದೆ. ಯುವರಾಜ್ 43 ಎಸೆತಗಳಲ್ಲಿ 60 ರನ್ ಸಿಡಿಸುವ ಮೂಲಕ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಭಾರತ ಟಾಸ್ ಸೋತು ಆಸ್ಟ್ರೇಲಿಯಾ ನಾಯಕ ಜಾರ್ಜ್ ಬೈಲಿ ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿದರು.

ವಿರಾಟ್ ಕೊಹ್ಲಿ ಅವರು 23 ರನ್‌ಗಳಿಗೆ ಔಟಾದ ಬಳಿಕ ಭಾರತದ ಸ್ಕೋರು 2ವಿಕೆಟ್‌ಗೆ 44 ರನ್‌ಗಳಾಗಿದ್ದಾಗ ಯುವರಾಜ್ ಬ್ಯಾಟಿಂಗ್‌ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ತಮ್ಮ ಸಾಮರ್ಥ್ಯ ಇನ್ನೂ ಕುಂದಿಲ್ಲ ಎಂದು ಸಾಬೀತು ಮಾಡಿದರು. ಯುವರಾಜ್ ಸ್ಕೋರಿನಲ್ಲಿ 5 ಬೌಂಡರಿಗಳು ಮತ್ತು 4 ಸಿಕ್ಸರುಗಳಿದ್ದವು. ಧೋನಿ 20 ಎಸೆತಗಳಲ್ಲಿ 24 ರನ್ ಸಿಡಿಸಿದರು. ಭಾರತ 159 ರನ್ ಸ್ಕೋರ್ ಮಾಡಿ ಆಸ್ಟ್ರೇಲಿಯಾಕ್ಕೆ 160 ರನ್‌ಗಳ ಗುರಿಯನ್ನು ನೀಡಿತು.

ಆಸ್ಟ್ರೇಲಿಯಾ ಪರ ವಾರ್ನರ್ 19 ಮತ್ತು ಮ್ಯಾಕ್ಸ್‌ವೆಲ್ 23 ರನ್ ಗಳಿಸಿದರು. ಅಮಿತ್ ಮಿಶ್ರಾ ಮತ್ತು ಅಶ್ವಿನ್ ಸ್ಪಿನ್ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಆಟಗಾರರು ಬೇಗನೇ ವಿಕೆಟ್ ಒಪ್ಪಿಸಿ ಒಬ್ಬರ ಹಿಂದೊಬ್ಬರು ಪೆವಿಲಿಯನ್‌ಗೆ ಮರಳಿದರು. ಇದರಿಂದ ಆಸ್ಟ್ರೇಲಿಯಾ 16.2 ಓವರುಗಳಲ್ಲಿ 86 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನ್ನಪ್ಪಿತು

ವೆಬ್ದುನಿಯಾವನ್ನು ಓದಿ