ವಿಂಡೀಸ್‌ಗೂ ತಟ್ಟಿದ ಗಾಯದ ಸಮಸ್ಯೆ; 4ನೇ ಪಂದ್ಯಕ್ಕಿಲ್ಲ ಬ್ರಾವೋ

ಗುರುವಾರ, 8 ಡಿಸೆಂಬರ್ 2011 (11:10 IST)
PTI
ಎಡ ಸ್ನಾಯು ಸೆಳೆತಕ್ಕೆ ಒಳಗಾಗಿರುವ ವೆಸ್ಟ್‌ಇಂಡೀಸ್ ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್ ಡ್ಯಾರೆನ್ ಬ್ರಾವೋ, ಆತಿಥೇಯ ಭಾರತದ ವಿರುದ್ಧ ನಡೆಯಲಿರುವ ನಾಲ್ಕನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದರಿಂದಾಗಿ ಪ್ರವಾಸಿ ತಂಡವು ಮತ್ತಷ್ಟು ಹಿನ್ನಡೆಯನ್ನು ಅನುಭವಿಸುವಂತಾಗಿದೆ. ಆರಂಭದ ಎರಡು ಪಂದ್ಯಗಳನ್ನು ಕಳೆದುಕೊಂಡಿರುವ ಕೆರೆಬಿಯನ್ ತಂಡಕ್ಕೆ ಸರಣಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

ಏಕದಿನ ಸರಣಿಗೂ ಮುನ್ನ ಗಾಯದ ಸಮಸ್ಯೆಗೊಳಗಾದ ಅನುಭವಿ ಶಿವನಾರಾಯಣ್ ಚಂದ್ರಪಾಲ್ ಸೇವೆಯನ್ನು ವಿಂಡೀಸ್ ಕಳೆದುಕೊಂಡಿತ್ತು. ಇದೀಗ ಬ್ರಾವೋ ಅಲಭ್ಯತೆ ಕಾಡುತ್ತಿದ್ದರೂ ಅಂತಿಮ ಏಕದಿನಕ್ಕೆ ಲಭ್ಯರಾಗುವ ಭರವಸೆ ಹೊಂದಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದ ಸಂದರ್ಭದಲ್ಲಿ ಬ್ರಾವೋ ಸ್ನಾಯು ಸೆಳೆತಕ್ಕೊಳಗಾಗಿದ್ದರು. ಇದರಿಂದಾಗಿ ಬ್ಯಾಟಿಂಗ್ ಮುಂದುವರಿಸಲಾಗದೇ ನಿವೃತ್ತಿ ಪಡೆಯುವಂತಾಗಿತ್ತು.

ಹೌದು ಖಂಡಿತವಾಗಿಯೂ ಬ್ರಾವೋ ಅವರನ್ನು ಮಿಸ್ ಮಾಡಿಕೊಳ್ಳಲಿದ್ದೇವೆ. ಆದರೆ ಇದು ಮತ್ತೊಬ್ಬ ಕ್ರಿಕೆಟಿಗನಿಗೆ ಉತ್ತಮ ಅವಕಾಶವಾಗಿರಲಿದೆ ಎಂದು ನಾಯಕ ಡ್ಯಾರೆನ್ ಸಮ್ಮಿ ಅಭಿಪ್ರಾಯಪಟ್ಟಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ