ಸಾಕ್ಷ್ಯಾಧಾರಗಳ ಕೊರತೆ; ಭಟ್, ಆಸಿಫ್‌ಗೆ ನೆರವಾಗುವ ಸಾಧ್ಯತೆ

ಸೋಮವಾರ, 31 ಅಕ್ಟೋಬರ್ 2011 (15:52 IST)
PTI
ನಿಖರ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮೋಸದಾಟ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಪಾಕಿಸ್ತಾನ ಮಾಜಿ ನಾಯಕ ಸಲ್ಮಾನ್ ಭಟ್ ಮತ್ತು ಮಾಜಿ ವೇಗಿ ಮೊಹಮ್ಮದ್ ಆಸಿಫ್ ಅವರಿಗೆ ನೆರವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಸಂಬಂಧ ಸಲ್ಮಾನ್ ಭಟ್ ವಕೀಲ ಅಫ್ತಬ್ ಗುಲ್ ಹೇಳಿಕೆ ನೀಡಿದ್ದು, ಲಂಡನ್ ಸೌಥ್‌ವಾರ್ಕ್ ನ್ಯಾಯಲಯದಲ್ಲಿ ಬೇಕಾದಷ್ಟು ಪುರಾವೆಗಳು ದಾಖಲಾಗಿಲ್ಲ. ಈ ಹಿನ್ನಲೆಯಲ್ಲಿ ತಮ್ಮ ಕಕ್ಷಿಗಾರನ ವಿರುದ್ಧ ತೀರ್ಪು ಬರುವ ಸಾಧ್ಯತೆ ಕಡಿಮೆಯಾಗಿದೆ ಎಂಬ ವಕೀಲರ ಹೇಳಿಕೆಯನ್ನು ಡೈಲಿ ಮೇಲ್ ವರದಿ ಮಾಡಿವೆ.

ಆರೋಪಿಗಳು ತಪ್ಪಿತ್ತಸ್ಥರು ಎಂಬುದನ್ನು ಸಾಬೀತುಪಡಿಸುವಷ್ಟು ಪುರಾವೆಗಳು ನ್ಯಾಯಲಕ್ಕೆ ಲಭಿಸಿಲ್ಲ. ಅಲ್ಲದೆ ಪ್ರಕರಣದ ಆರೋಪಿ ಬುಕ್ಕಿ ಮಜರ್ ಮಜೀದ್ ಅವರಿಂದ ಆಟಗಾರರು ಹಣ ಪಡೆದಿದ್ದಾರೆ ಎಂಬ ನ್ಯೂಸ್ ಆಫ್ ದಿ ವಲ್ಡ್ ಆಪಾದನೆಯು ಅನಿರ್ಣಾಯಕವಾಗಿದೆ ಎಂದು ಹೇಳಲಾಗಿದೆ.

ಪ್ರಸ್ತುತ ಭಟ್ ಹಾಗೂ ಆಸಿಫ್ ಮೇಲೆ ವಿಧಿಸಲಾಗಿರುವ ಶಿಕ್ಷೆಯು ನ್ಯಾಯಸಮ್ಮತವಲ್ಲ ಎಂದು ವಾದ ಮಂಡನೆ ಮಾಡಲಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದ ಅಂದಿನ ನಾಯಕ ಸಲ್ಮಾನ್ ಭಟ್ ಹಾಗೂ ವೇಗಿಗಳಾದ ಮೊಹಮ್ಮದ್ ಆಸಿಫ್ ಹಾಗೂ ಮೊಹಮ್ಮದ್ ಅಮೇರ್ ಉದ್ದೇಶಪೂರ್ವಕವಾಗಿಯೇ ನೊ ಬಾಲ್ ಎಸೆದಿದ್ದರು ಎಂಬ ಆರೋಪ ದಾಖಲಾಗಿತ್ತು. ಆದರೆ ತಮ್ಮ ಮೇಲಿನ ಆರೋಪಗಳನ್ನೆಲ್ಲ ಭಟ್ ಹಾಗೂ ಆಸಿಫ್ ನಿರಾಕರಿಸುತ್ತಲೇ ಬಂದಿದ್ದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ