ಅಖ್ತರ್ ವಿರುದ್ಧ ಪಿಸಿಬಿಯ ಮೃದು ಧೋರಣೆ

ಮಂಗಳವಾರ, 6 ಮೇ 2008 (12:01 IST)
ರಾವಲ್ಪಿಂಡಿ ಎಕ್ಸ್‌‌‌‌‌ಪ್ರೆಸ್ ವಿರುದ್ಧ ಇನ್ನಷ್ಟು ಮೃದು ಧೋರಣೆ ಅನುಸರಿಸುವತ್ತ ಸಾಗಿರುವ ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅಖ್ತರ್ ವಿರುದ್ಧ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ಕೈಬಿಡಲು ತೀರ್ಮಾನಿಸಿದೆ.

ಈ ನಿಟ್ಟಿನಲ್ಲಿ ಕಳೆದ ರಾತ್ರಿ ಶೋಯಬ್ ಅಖ್ತರ್ ಮತ್ತು ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ನಸೀಂ ಅಶ್ರಫ್ ನಡುವೆ ಸಂಧಾನ ಸಭೆಯು ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ ಅವರ ಸಲಹೆಗಾರ ರೆಹ್ಮಾನ್ ಮಲ್ಲಿಕ್ ಅವರ ನಿವಾಸದಲ್ಲಿ ನಡೆಸಲಾಯಿತು. ಭೋಜನ ಕೂಟಕ್ಕೆ ಆಗಮಿಸಿದ್ದ ಶೋಯಬ್ ಅಖ್ತರ್ ಈ ಸಂದರ್ಭದಲ್ಲಿ ಅಶ್ರಫ್ ಅವರಲ್ಲಿ ಬೇಷರತ್ ಕ್ಷಮೆಯಾಚನೆ ಕೇಳಿದ ಕಾರಣ ಮಾನ ನಷ್ಟ ಮೊಕದ್ದಮೆಯನ್ನು ಹಿಂದೆಗೆದುಕೊಳ್ಳುವ ತೀರ್ಮಾನವನ್ನು ಪಿಸಿಬಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ತಾನು ಮಾಡಿರುವ ಆಪಾದನೆಗಳಿಗಾಗಿ ಅಖ್ತರ್ ಈಗಾಗಲೇ ಸಾರ್ವಜನಿಕವಾಗಿ ಮತ್ತು ವೈಯಕ್ತಿಕವಾಗಿ ಕ್ಷಮೆಯಾಚಿಸಿರುವುದರಿಂದ ಅಖ್ತರ್ ಅವರನ್ನು ಕ್ಷಮಿಸಲಾಗಿದೆ. ನನ್ನ ಮೇಲೆ ಮಾಡಲಾಗಿದ್ದ ಆಪಾದನೆಗಳಲ್ಲಿ ಹುರುಳಿಲ್ಲ ಎನ್ನುವುದನ್ನು ಅಖ್ತರ್ ಒಪ್ಪಿಕೊಂಡಿರುವುದರಿಂದ ಮಾನ ನಷ್ಟ ಮೊಕದ್ದಮೆ ಹೂಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅಶ್ರಫ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ನ್ಯಾಯಾಲಯದಲ್ಲಿ ಹೂಡಲಾಗಿದ್ದ ಮಾನ ನಷ್ಟ ಮೊಕದ್ದಮೆಯನ್ನು ಕೈಬಿಡಲಾಗಿದ್ದರೂ, ಐದು ವರ್ಷಗಳ ನಿಷೇಧದ ತೀರ್ಪಿನ ಕುರಿತು ಮೇಲ್ಮನವಿ ವಿಚಾರಣಾ ಸಮಿತಿಯ ವಿಚಾರಣಾ ಪ್ರಕ್ರಿಯೆ ಮುಂದುವರಿಯಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಾರ್ಯವ್ಯಾಪ್ತಿಯ ಮೇಲ್ಮನವಿ ವಿಚಾರಣಾ ಸಮಿತಿಯು ಕಾರ್ಯನಿರ್ವಹಿಸುವುದಿಲ್ಲ. ತನ್ನ ಮುಂದಿನ ವಿಚಾರಣೆಯನ್ನು ಜೂನ್ 4 ರಂದು ಅಖ್ತರ್ ವಿರುದ್ಧ ಮಾಡಲಾಗಿರುವ ದೋಷಾರೋಪಣೆಯ ವಿಚಾರಣೆಯನ್ನು ಕೈಗೆತ್ತಿಕೊ

ವೆಬ್ದುನಿಯಾವನ್ನು ಓದಿ