ಅಟಪಟ್ಟುನೊಂದಿಗೆ ಲೋಕುಗೆ ಮಾತುಕತೆ

ಗುರುವಾರ, 11 ಅಕ್ಟೋಬರ್ 2007 (14:44 IST)
ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ತಮಗೆ ಎಸಗಿದ ಅನ್ಯಾಯದಿಂದ ಅಕ್ರೋಶಗೊಂಡಿರುವ ಮಾರ್ವನ್ ಅಟಪಟ್ಟು ಅವರ ಅವಶ್ಯಕತೆ ಇಂದು ಶ್ರೀಲಂಕಾ ತಂಡಕ್ಕೆ ಅವಶ್ಯವಾಗಿದ್ದು, ಅವರನ್ನು ತಂಡಕ್ಕೆ ಮರಳಿಸಲು ನಡೆಯುತ್ತಿರುವ ಅಂತಿಮ ಪ್ರಯತ್ನವಾಗಿ ಅಲ್ಲಿನ ಕ್ರೀಡಾ ಸಚಿವರು ಅಟಪಟ್ಟು ಅವರನ್ನು ಬೇಟಿಯಾಗಲಿದ್ದಾರೆ.

ಅಟಪಟ್ಟು ಅವರನ್ನು ಭೇಟಿಯಾಗಿ ಚರ್ಚೆ ನಡೆಸಿ ಸಮಸ್ಯೆಗಳ ಕುರಿತು ಮಾತುಕತೆ ನಡೆಸಿ ಪರಿಹರಿಸುವುದಕ್ಕೆ ಕ್ರೀಡಾ ಸಚಿವ ಗಾಮಿನಿ ಲೊಕುಗೆ ಪ್ರಯತ್ನಿಸಲಿದ್ದಾರೆ. ಈ ಮೊದಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಟಪಟ್ಟು ಅವರೊಂದಿಗೆ ಮಾತುಕತೆ ನಡೆಸಿತ್ತು. ಆದರೆ ಅಟಪಟ್ಟು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಮೇಲೆ ತಂಡದ ಪರ ಆಡುವುದಕ್ಕೆ ಒಪ್ಪಿಗೆ ಸೂಚಿಸುವುದಾಗಿ ಹೇಳಿದ್ದರು.

ಇದೇ ಸಮಯದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ, ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದ್ದು ಅಟಪಟ್ಟು ಸ್ಥಾನ ಪಡೆದುಕೊಂಡಿಲ್ಲ. ಆದರೆ ಕ್ರೀಡಾ ಸಚಿವಾಲಯ ಒಪ್ಪಿಗೆ ನೀಡಿದ ನಂತರವಷ್ಟೇ ಪ್ರಕಟಿತ ತಂಡಕ್ಕೆ ಅದಿಕೃತ ಮಾನ್ಯತೆ ದೊರೆಯಲಿದೆ.

ಬುಧವಾರ, ಕ್ರೀಡಾ ಸಚಿವ ಲೋಕುಗೆ ಅವರು ಆಯ್ಕೆ ಸಮಿತಿ ಅಧ್ಯಕ್ಷ ಅಸಂತಾ ಡಿ ಮೇಲ್ ಅವರನ್ನು ಭೇಟಿಯಾಗಿ ಉಂಟಾಗಿರುವ ಮನಸ್ಥಾಪವನ್ನು ಪರಿಹರಿಸಲು ಮುಂದಾಗಬೇಕು ಎಂದು ಕೇಳಿಕೊಂಡಿದ್ದಾರೆ.

ಇದಕ್ಕೂ ಮುನ್ನ ಅಟಪಟ್ಟು ಅವರು ಆಯ್ಕೆ ಸಮಿತಿಯಲ್ಲಿ ತನಗೆ ನಂಬಿಕೆ ಇಲ್ಲ. ನಾನು ಇನ್ನು ಕನಿಷ್ಟ ಎರಡು ವರ್ಷ ಕ್ರಿಕೆಟ್ ಆಡಬೇಕೆನ್ನುವುದು ಇಚ್ಚೆಯಾಗಿದೆ ಎಂದು ಹೇಳಿದ್ದರು.

ವೆಬ್ದುನಿಯಾವನ್ನು ಓದಿ