ಅತಿ ವೇಗದಲ್ಲಿ 19 ಶತಕ ಗಳಿಸಿದ ವಿಶ್ವದಾಖಲೆ ತನ್ನದಾಗಿಸಿಕೊಂಡ ವಿರಾಟ್

ಶುಕ್ರವಾರ, 28 ಫೆಬ್ರವರಿ 2014 (11:10 IST)
PTI
ಕೇವಲ 129 ಇನ್ನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ಅತಿ ವೇಗದಲ್ಲಿ 19 ಶತಕ ಗಳಿಸಿದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಕಳೆದ ಬುಧವಾರ ಬಾಂಗ್ಲಾದೇಶದ ವಿರುದ್ಧ ಶತಕ136 ಸಿಡಿಸುವುದರ ಮೂಲಕ ಕೊಹ್ಲಿ ತಮ್ಮ ರಾಯಲ್ ಚಾಂಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರ ಕ್ರಿಸ್ ಗೈಲ್ ಅವರ ದಾಖಲೆಯನ್ನು ಮುರಿದಿದ್ದಾರೆ. ಗೈಲ್ 19 ಶತಕಗಳನ್ನು ದಾಖಲಿಸಲು 189 ಪಂದ್ಯಗಳನ್ನು ತೆಗೆದುಕೊಂಡಿದ್ದರು.

ಈ ಗಡಿಯನ್ನು ದಾಟಲು ಸಚಿನ್ 194, ಮತ್ತು ಸೌರವ್ ಗಂಗೂಲಿ 197 ಪಂದ್ಯಗಳನ್ನು ಆಡಿದ್ದರು.

ಅಲ್ಲದೇ ವಿರಾಟ್ ನ 136 ರನ್ ಗಳು ಏಷ್ಯಾ ಕಪ್ ನಲ್ಲಿ ನಾಯಕನೊಬ್ಬ ಗಳಿಸಿದ ಅತ್ಯುತ್ತಮ ಮೊತ್ತವಾಗಿದೆ. ಈ ಮೊದಲು ಸೌರವ್ ಮೇ 2000 ರಲ್ಲಿ ಬಾಂಗ್ಲಾದೇಶದ ವಿರುದ್ಧ ಅಜೇಯ 135 ರನ್ ಗಳಿಸಿದ್ದರು.

ಈ ಪಂದ್ಯದಲ್ಲಿ ಪಂದ್ಯಪುರುಷೋತ್ತಮ ಎನಿಸಿದ್ದ ವಿರಾಟ್ ಏಕದಿನ ಪಂದ್ಯಗಳಲ್ಲಿ ಇಲ್ಲಿಯವರೆಗೆ 18 ಬಾರಿ ಮೆನ್ ಆಫ್ ದಿ ಮೆಚ್ ಪ್ರಶಸ್ತಿ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ