ಅಶ್ವಿನ್‌ಗೆ ಐದರ ಗೊಂಚಲು; ವಿಂಡೀಸ್ 590ಕ್ಕೆ ಸರ್ವಪತನ

ಗುರುವಾರ, 24 ನವೆಂಬರ್ 2011 (10:48 IST)
ಇಲ್ಲಿನ ವಾಂಖೆಡೆ ಮೈದಾನದಲ್ಲಿ ಆತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನದಾಟ ಮುಂದುವರಿಸಿದ್ದ ಪ್ರವಾಸಿ ವೆಸ್ಟ್‌ಇಂಡೀಸ್ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 590 ರನ್ನುಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆ ಮೂಲಕ ಮಹೇಂದ್ರ ಸಿಂಗ್ ಧೋನಿ ಬಳಗಕ್ಕೆ ಕಠಿಣ ಸವಾಲನ್ನೇ ಒಡ್ಡಿದೆ. ಭಾರತದ ಪರ ಸರಣಿಯಲ್ಲಿ ಮತ್ತೊಂದು ಐದು ವಿಕೆಟುಗಳ ಸಾಧನೆ ಮಾಡಿದ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಪ್ರಭಾವಿ ಎನಿಸಿಕೊಂಡರು.

ಎರಡನೇ ದಿನದಾಟದಲ್ಲಿ ಡ್ಯಾರೆನ್ ಬ್ರಾವೋ ಬಾರಿಸಿದ ಆಕರ್ಷಕ ಶತಕದ (166) ನೆರವಿನಿಂದ ಕೆರೆಬಿಯನ್ ತಂಡವು ಒಂಬತ್ತು ವಿಕೆಟ್ ನಷ್ಟಕ್ಕೆ 575 ರನ್ನುಗಳ ಬೃಹತ್ ಮೊತ್ತ ಪೇರಿಸಲು ನೆರವಾಗಿತ್ತು. ಆದರೆ ಅದೇ ಮೊತ್ತಕ್ಕೆ ಡಿಕ್ಲೇರ್ ಮಾಡಿಕೊಳ್ಳಲು ಮನಸ್ಸು ಮಾಡದ ವಿಂಡೀಸ್ ತಂಡವು ಇಂದು ಮತ್ತೆ ಬ್ಯಾಟಿಂಗ್ ಮುಂದುವರಿಸಿತ್ತು.

ಇದೀಗ ಎಲ್ಲರ ಕಣ್ಣು 100ನೇ ಅಂತರಾಷ್ಟ್ರೀಯ ಶತಕದ ಹೊಸ್ತಿಲಲ್ಲಿರುವ ಸಚಿನ್ ತೆಂಡೂಲ್ಕರ್ ಮೇಲೆ ನೆಟ್ಟಿದ್ದು, ತವರಿನ ಅಂಗಣದಲ್ಲೇ ಐತಿಹಾಸಿಕ ಸಾಧನೆ ಮಾಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ