ಆಸ್ಟ್ರೇಲಿಯಾ ತಂಡದ ಆಯ್ಕೆ ಹಾಸ್ಯಾಸ್ಪದ : ಚಾಪೆಲ್

ಸೋಮವಾರ, 6 ಜುಲೈ 2009 (13:12 IST)
ಆಶಸ್ ಸರಣಿಗಾಗಿ ಆಸ್ಟ್ರೇಲಿಯಾ ತಂಡವನ್ನು ಆಯ್ಕೆ ಮಾಡಿರುವ ಆಯ್ಕೆ ಸಮಿತಿಯ ನಿಲುವು ಹಾಸ್ಯಾಸ್ಪದವಾಗಿದೆ. ಇದರಿಂದಾಗಿ ಇಂಗ್ಲೆಂಡ್ ತಂಡ ಸುಲಭವಾಗಿ ಸರಣಿಯನ್ನು ಗೆಲ್ಲುವ ವರದಾನವಾಗಲಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಕಿಡಿಕಾರಿದ್ದಾರೆ.

ಆಸ್ಟ್ರೇಲಿಯಾ ತಂಡದ ಆಯ್ಕೆ ಸಮಿತಿಯ ನಿಲುವು ಹಾಸ್ಯಾಸ್ಪದವಾಗಿದೆ ಎಂದು ಆಯ್ಕೆ ಸಮಿತಿ ಅದ್ಯಕ್ಷ ಫಿಲಿಪ್ ಹುಗೆಸ್ ಅವರ ಆಯ್ಕೆ ನಿರ್ಧಾರವನ್ನು ಖಂಡಿಸಿದ್ದಾರೆ.

ಉಭಯ ದೇಶಗಳ ಬೌಲಿಂಗ್ ಸಾಮರ್ಥ್ಯವನ್ನು ಹೋಲಿಸಿದಲ್ಲಿ ಇಂಗ್ಲೆಂಡ್ ತಂಡದ ಆಂಡ್ರೂ ಸ್ಟ್ರಾಸ್ ಅವರ ತಂಡ ಬಲಶಾಲಿಯಾಗಿದ್ದು,ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಗಳಿವೆ ಎಂದು ಚಾಪೆಲ್ ಹೇಳಿದ್ದಾರೆ.

ಉಭಯ ತಂಡಗಳಲ್ಲಿ ಬೌಲಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದ ತಂಡ ಸರಣಿಯಲ್ಲಿ ಗೆಲುವು ಸಾಧಿಸುತ್ತದೆ ಎನ್ನುವುದು ನನ್ನ ನಿಲುವಾಗಿದೆ. ಆದರೆ ಸಾಮಾನ್ಯವಾಗಿ ನಮ್ಮ ತಂಡ ಉತ್ತಮ ಬೌಲಿಂಗ್ ದಾಳಿ ನಡೆಸಲಿ ಎಂದು ಹಾರೈಸುತ್ತೇನೆ ಎಂದು ಕ್ರಿಕೆಟಿಗ ಹಾಗೂ ವೀಕ್ಷಣಾಕಾರ ಚಾಪೆಲ್ ತಿಲಿಸಿದ್ದಾರೆ.

ಪ್ರಸಕ್ತ ಸಮಯದಲ್ಲಿ ಇಂಗ್ಲೆಂಡ್ ತಂಡ (ಆಂಡ್ರೂ) ಫ್ಲಿಂಟಾಫ್ ಮತ್ತು ಅವರ ದೈಹಿಕ ಅರ್ಹತೆಯನ್ನು ಅವಲಂಬಿಸಿದೆ.ಅವರು ದೈಹಿಕವಾಗಿ ಆರೋಗ್ಯವಾಗಿದ್ದು, ಐದು ಟೆಸ್ಟ್ ಸರಣಿಗಳಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಮಾರಕವಾಗಲಿದೆ ಎಂದು ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ