ಆಸ್ಟ್ರೇಲಿಯಾ ಪ್ರವಾಸಕ್ಕೆ ಡಿಸೆಂಬರ್‌ನಲ್ಲಿ ಆಯ್ಕೆ

ಸೋಮವಾರ, 12 ನವೆಂಬರ್ 2007 (18:26 IST)
ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಪಂದ್ಯಾವಳಿಗೆ ಪಾಕ್ ವಿರುದ್ದದ ಎರಡನೇಯ ಪಂದ್ಯದ ನಂತರ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ಕ್ರಿಕೆಟ್ ತಂಡದ ಆಟಗಾರರನ್ನು ಪಾಕ್ ವಿರುದ್ದದ ಎರಡನೇ ಅಥವಾ ಮೂರನೆ ಪಂದ್ಯಾವಳಿಯ ನಂತರ ಆಯ್ಕೆ ಮಾಡಲಾಗುವುದು ಇದರಲ್ಲಿ ವಿಳಂಬ ನೀತಿ ಅನುಸರಿಸುವ ಪ್ರಮೇಯೇ ಇಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ನಿರಂಜನ ಷಾ ರಾಜ್‌ಕೋಟ್‌ನಲ್ಲಿ ತಿಳಿಸಿದ್ದಾರೆ.

ಭಾರತ ಪಾಕಿಸ್ತಾನದ ವಿರುದ್ದ ಎರಡನೇ ಟೆಸ್ಟ್ ಪಂದ್ಯವನ್ನು ಕೊಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನವೆಂಬರ್ 30 ರಂದು ನಡೆಯಲಿದ್ದು,ಮೂರನೇಯ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ಡಿಸೆಂಬರ್ 8 ರಂದು ನಡೆಯಲಿದೆ ಎಂದು ಷಾ ತಿಳಿಸಿದ್ದಾರೆ.

ಪಂದ್ಯಗಳು ನಡೆಯುವ ಸಂದರ್ಭದಲ್ಲಿ ತಂಡವನ್ನು ಆಯ್ಕೆ ಮಾಡಲಾಗದು. ಆಯ್ಕೆದಾರರಿಗೆ ತಂಡವನ್ನು ಆಯ್ಕೆ ಮಾಡುವುದು ಕಠಿಣವಾಗುತ್ತದೆ ಎಂದು ನುಡಿದರು.

ಭಾರತ ಆಸ್ಟ್ರೇಲಿಯಾದಲ್ಲಿ ಬಾರ್ಡರ್- ಗಾವಾಸ್ಕರ್ ಟ್ರೂಫಿ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದೆ.ಮೆಲ್ಬೋರ್ನ್ ಡಿಸೆಂಬರ್ 26 ರಿಂದ 30, ಸಿಡ್ನಿಯಲ್ಲಿ ಜನೆವರಿ 2ರಿಂದ 6, ಪರ್ತ್‌ನಲ್ಲಿ 16 ರಿಂದ 20 ಅಡಿಲೇಡ್‌ನಲ್ಲಿ ಜನೆವರಿ 24 ರಿಂದ28ರವರೆಗೆ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ