ಆಸ್ಪತ್ರೆಯಿಂದ ಅಖ್ತರ್ ಬಿಡುಗಡೆ

ಗುರುವಾರ, 29 ನವೆಂಬರ್ 2007 (09:59 IST)
ಎದೆ ಸೋಂಕಿನಿಂದ ಕಳೆದ ಎರಡು ದಿನಗಳಿಂದ ಬಳಲುತ್ತಿದ್ದ ವೇಗದ ಬೌಲರ್ ಶೋಯಬ್ ಅಖ್ತರ್ ಅವರನ್ನು ಬುಧವಾರ ಸಾಯಂಕಾಲ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಅವರು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಶುಕ್ರವಾರದಿಂದ ಪ್ರಾರಂಭವಾಗಲಿರುವ ಎರಡನೆ ಟೆಸ್ಟ್ ಪಂದ್ಯದಲ್ಲಿ ಅಖ್ತರ್ ಆಡಲಿದ್ದಾರೆ.

ಜ್ವರದಲ್ಲಿನ ಪ್ರಮಾಣದಲ್ಲಿ ಕೂಡ ಇಳಿಕೆಯಾಗಿದ್ದು, ಸೋಂಕು ಕೂಡ ನಿಯಂತ್ರಣದಲ್ಲಿ ಇರುವುದರಿಂದ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಅಪೋಲೊ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿ ಆರ್ ರಮಣನ್ ಹೇಳಿದ್ದಾರೆ.

ಡಾ. ಶ್ಯಾಮೇಶ್ ಬ್ಯಾನರ್ಜಿ ಅವರು ಅಖ್ತರ್ ಅವರನ್ನು ಸಂಪೂರ್ಣವಾಗಿ ಪರೀಶಿಲಿಸಿದ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬರಲಾಯಿತು ಎಂದು ಅವರು ಹೇಳಿದರು.

ಕೆಲ ಔಷದಿಗಳನ್ನು ಸೇವಿಸುವುದಕ್ಕೆ ಹೇಳಲಾಗಿದ್ದು, ಗುರುವಾರ ಪೂರ್ಣ ವಿಶ್ರಾಂತಿ ಪಡೆದ ನಂತರ ಅವರು ತಮ್ಮ ಎಂದಿನ ಕೆಲಸಗಳಲ್ಲಿ ತೋಡಗಬಹುದು ಎಂದು ಹೇಳಿದ್ದಾರೆ.

ಅಖ್ತರ ಗಟ್ಟಿ ಮನುಷ್ಯ ಎಂದು ಹೇಳಿರುವ ರಮಣನ್ ಅವರು ಶುಕ್ರವಾರ ಅವರು ಆಡುವುದಕ್ಕೆ ಅನುಮತಿ ನೀಡುವುದು ತಂಡದ ಫಿಸಿಯೋ ಮತ್ತು ವ್ಯವಸ್ಥಾಪಕರಿಗೆ ಬಿಟ್ಟ ವಿಷಯ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ