ಇಂಜಿ ಇಲ್ಲದ ಪಾಕ್ ತಂಡ: ಕುಂಬ್ಳೆ

ಶುಕ್ರವಾರ, 30 ನವೆಂಬರ್ 2007 (10:49 IST)
PTI
ಇಂಜಮಾಮ್ ಇಲ್ಲದ ಪಾಕಿಸ್ತಾನ ತಂಡ ಮದ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿ ಕಳೆಗುಂದಿದೆ. ಇದು ಸಹಜವೂ ಅಂತಹ ಒಬ್ಬ ಶ್ರೇಷ್ಟ ಕ್ರಿಕೆಟಿಗ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿಯಾದ ನಂತರ ಕೆಲಕಾಲ ತಂಡಕ್ಕೆ ಆ ಸ್ಥಾನದ ಶೂನ್ಯತೆ ಕಾಡುತ್ತದೆ. ಆದರೆ ಈಗಲೂ ಪಾಕಿಸ್ತಾನ ಮೊದಲಿನಂತೆ ಪ್ರಬಲ ಪೈಪೋಟಿ ನೀಡುವುದು ನಿಜ ಎಂದು ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಅನಿಲ್ ಕುಂಬ್ಳೆ ಅವರು ಹೇಳಿದರು.

ದೆಹಲಿ ಪಂದ್ಯದ ಗೆಲುವಿನ ಕುರಿತು ಮಾತನಾಡಿದ ಅವರು, ಪಂದ್ಯವನ್ನು ಆರು ವಿಕೆಟ್‌ಗಳ ಅಂತರದಿಂದ ಗೆದ್ದರೂ ಕೂಡ, ಅಂತಿಮ ಹಂತದಲ್ಲಿ ಕೆಲಕಾಲ ಪಂದ್ಯದ ಮೇಲೆ ಹಿಡಿತ ಸಾಧಿಸುವುದಕ್ಕೆ ಉಭಯ ತಂಡಗಳ ನಡುವೆ ಪೈಪೋಟಿ ಎರ್ಪಟ್ಟಿತ್ತು.

ಒಂದು ವೇಳೆ ನಾವು ನಾಲ್ಕನೆ ದಿನದ ಆಟದಲ್ಲಿ ಪಾಕಿಸ್ತಾನದ ಐದು ವಿಕೆಟ್‌ಗಳನ್ನು ಮೊದಲು ಕಿತ್ತುಕೊಳ್ಳದೇ ಹಾಗೆ ಬಿಟ್ಟಿದ್ದಲ್ಲಿ ಪಂದ್ಯಕ್ಕೆ ಪೂರ್ಣ ಪ್ರಮಾಣದ ರೋಚಕತೆ ಬರುತ್ತಿತ್ತು. ಉತ್ತಮ ಮೊತ್ತ ಕಲೆ ಹಾಕಿದ ಪಾಕ್, ಭಾರತದ ಬ್ಯಾಟಿಂಗ್ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನವನ್ನು ಮಾಡುತ್ತಿತ್ತು.

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಸಾಧಿಸಿದ ಅದೇ ಗೆಲುವಿನ ಓಟವನ್ನು ಭಾರತ, ಈಡನ್ ಗಾರ್ಡನ್‌ನಲ್ಲಿ ಕೂಡ ಮುಂದುವರಿಸಲಿದೆ. ಶುಕ್ರವಾರದಿಂದ ಪ್ರಾರಂಭವಾಗುವ ಪಂದ್ಯವನ್ನು ಭಾರತ ಗೆದ್ದುಕೊಳ್ಳುವ ಮೂಲಕ ಸರಣಿಯಲ್ಲಿ 2-0ರ ಮುನ್ನಡೆ ಸಾಧಿಸಲು ನಿಶ್ಚಿತವಾಗಿ ಪ್ರಯತ್ನಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಮ್ಮ ಸಾಮರ್ಥ್ಯ ಮತ್ತು ದುರ್ಬಲತೆಗಳ ಅರಿವು ತಮಗಿದ್ದು. ನಮ್ಮ ಸಾಮರ್ಥ್ಯದ ಬಲದ ಮೇಲೆ ಪಾಕ್ ವಿರುದ್ಧ ಸೆಣಸಲಿದ್ದೆವೆ. 1979-80ರ ನಂತರ ಭಾರತ ಪ್ರವಾಸಿ ತಂಡ ಪಾಕ್ ವಿರುದ್ಧ ತನ್ನ ನೆಲದ ಮೇಲೆ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಡಿಲ್ಲ. ಈ ಬಾರಿ ನಮಗೆ 28 ವರ್ಷಗಳ ನಂತರ ಅಪರೂಪದ ಸಾಧನೆಯ ಅವಕಾಶ ಒದಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ