ಇಂಡಿಯನ್ಸ್‌ಗಳೊಂದಿಗೆ ಸಚಿನ್ ಹುಟ್ಟು ಹಬ್ಬ

ಗುರುವಾರ, 24 ಏಪ್ರಿಲ್ 2008 (17:21 IST)
ತೀರ ಸಾದಾರಣವಾಗಿ ಆದರೆ ಆತ್ಮೀಯ ಎನಿಸುವಂತೆ ತನ್ನ 35ನೇ ಹುಟ್ಟು ಹಬ್ಬವನ್ನು ಸಚಿನ್ ತೆಂಡೂಲ್ಕರ್ ಇಲ್ಲಿನ ಹೋಟೆಲ್ ಒಂದರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸಹ ಕ್ರಿಕೆಟಿಗರ ಸಮ್ಮುಖದಲ್ಲಿ ಆಚರಿಸಿಕೊಂಡರು.

ಮುಂಬೈ ಇಂಡಿಯನ್ಸ್ ತಂಡದ ಲಾಂಛನದ ಮಾದರಿಯಲ್ಲಿ ಮಾಡಿದ್ದ ಕೇಕ್‌ನ್ನು ಸಚಿನ್ ಕತ್ತರಿಸಿ ಹುಟ್ಟು ಹಬ್ಬದ ಆಚರಣೆಗೆ ಚಾಲನೆ ನೀಡಿದರು. ಬುಧವಾರ ಇಂಡಿಯನ್ಸ್ ತಂಡದ ಲ್ಯುಕ್ ರಾಂಚಿ ಮತ್ತು ವಿಕ್ರಾಂತ್ ಯೆಲಿಗಟಿ ಅವರ ಹುಟ್ಟು ಹಬ್ಬ ಇತ್ತು ಪಂದ್ಯ ನಡೆಯುತ್ತಿದ್ದ ಕಾರಣ ಈರ್ವರು ಕ್ರಿಕೆಟಿಗರು ತಮ್ಮ ಹುಟ್ಟು ಹಬ್ಬವನ್ನು ಲಿಟಲ್ಲ ಮಾಸ್ಟರ್‌ನ ಹುಟ್ಟು ಹಬ್ಬದೊಂದಿಗೆ ಆಚರಿಸಿಕೊಂಡರು.

ನ್ಯೂಜಿಲೆಂಡ ತಂಡದ ರಾಂಚಿ 27ನೇ ವಯಸ್ಸಿಗೆ ಕಾಲಿಟ್ಟರೆ ಯಲಿಗಟಿ 23ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿನ್ ತೆಂಡೂಲ್ಕರ್ ಅವರು ಹುಟ್ಟು ಹಬ್ಬವನ್ನು ಹೆಂಡತಿ ಮಕ್ಕಳೊಂದಿಗೆ ಆಚರಿಸಿಕೊಂಡಿದ್ದರೇ ಮಜಾ ಬರುತ್ತಿತ್ತು, ಅಂಜಲಿ ಮತ್ತು ಸಾರಾ ಶುಕ್ರವಾರ ಮೋಹಾಲಿಗೆ ಬರಲಿದ್ದಾರೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ