ಇದು ಮಾದ್ಯಮಗಳ ಆಟ: ರಜಪೂತ

ಸೋಮವಾರ, 31 ಡಿಸೆಂಬರ್ 2007 (15:05 IST)
ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್‌ ಯುವರಾಜ್ ವರ್ತನೆ ಕುರಿತು ತಾನು ಅಪಸ್ವರ ಎತ್ತಿಲ್ಲ. ಈ ರೀತಿ ಆಸ್ಟ್ರೇಲಿಯದ ಮಾದ್ಯಮಗಳು ತಿರುಚಿ ವರದಿ ಮಾಡುವ ಮೂಲಕ ಯುವರಾಜ್ ಸಿಂಗ್ ಅವರನ್ನು ಗೊಂದಲಕ್ಕೆ ಸಿಲುಕಿಸುವ ಪ್ರಯತ್ನವನ್ನು ಅವುಗಳು ಮಾಡುತ್ತಿವೆ ಎಂದು ಟೀಮ್ ಇಂಡಿಯಾದ ಸಹಾಯಕ ಕೋಚ್ ಲಾಲ್ ಚಂದ್ ರಜಪೂತ್ ಹೇಳಿದ್ದಾರೆ.

ಮೆಲ್ಬರ್ನ್ ಮೂಲದ "ದಿ ಏಜ್" ದಿನ ಪತ್ರಿಕೆಯು ಯುವರಾಜ್ ಸಿಂಗ್ ಅವರ ವರ್ತನೆಗೆ ತಂಡದಲ್ಲಿನ ಇತರ ಕ್ರಿಕೆಟರುಗಳಿಗೆ ಬೇಸರ ತರಿಸಿದ್ದು, ಯುವರಾಜ್ ಸಿಂಗ್‌ರೊಂದಿಗೆ ಈ ಕುರಿತು ಚರ್ಚಿಸಲಾಗುವುದು ಎಂದು ರಜಪೂತ್ ಹೇಳಿದ್ದಾರೆ ಎಂದು ವರದಿ ಮಾಡಿತ್ತು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪತ್ರಿಕೆ ಉದ್ದೇಶ ಪೂರ್ವಕವಾಗಿ ನನ್ನ ಹೇಳಿಕೆಯನ್ನು ತಿರುಚಿ ಬರೆದಿದೆ. ಮಾದ್ಯಮ ವ್ಯವಸ್ಥಾಪಕರ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಟಿ ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಈ ವಿಚಾರ ಚರ್ಚೆಗೆ ಬಂದೇ ಇಲ್ಲ ಮತ್ತು ಈ ರೀತಿ ಹೇಳಿಕೆಯನ್ನು ನೀಡಿಲ್ಲ ಎಂದು ಹೇಳಿದರು.

ಯುವರಾಜ್ ತಂಡದ ಅತ್ಯುತ್ತಮ ಕ್ಷೇತ್ರ ರಕ್ಷಕ ಅವರ ಸಾಮರ್ಥ್ಯದಲ್ಲಿ ನಂಬಿಕೆ ಇದೆ. ಈ ಕುರಿತು ಸಂಶಯವೇ ಬೇಡ ಎಂದು ರಜಪೂತ್ ಹೇಳಿದ್ದರು.

ಆಸ್ಟ್ರೇಲಿಯದ ಮಾದ್ಯಮವು ಪ್ರವಾಸಕ್ಕೆ ಮುನ್ನ ಮಾನಸಿಕವಾಗಿ ನಮ್ಮ ಮೇಲೆ ದಾಳಿ ಮಾಡುವ ತಂತ್ರವನ್ನು ಅನುಸರಿಸುತ್ತಿದ್ದು, ಪ್ರತಿ ಬಾರಿ ನಮ್ಮ ಹೇಳಿಕೆಯನ್ನು ತಿರುಚಿ ಬರೆಯುವ ಪ್ರಯತ್ನ ಮಾಡುತ್ತಿದೆ ಎಂದು ರಜಪೂತ ಆಪಾದಿಸಿದ್ದಾರೆ.

ವೆಬ್ದುನಿಯಾವನ್ನು ಓದಿ