ಇದೇ ತೀವ್ರತೆ ಮುಂದಿನ ಪಂದ್ಯದಲ್ಲೂ ಕಾಪಾಡಬೇಕು; ಗೌತಿ

ಶುಕ್ರವಾರ, 30 ಸೆಪ್ಟಂಬರ್ 2011 (12:02 IST)
ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುರುವಾರ ದಾಖಲಾದ ಭರ್ಜರಿ ಗೆಲುವಿನ ನಂತರ ಪ್ರತಿಕ್ರಿಯಿಸಿರುವ ಕೊಲ್ಕತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್, ಪ್ರಧಾನ ಸುತ್ತಿನ ಅಂತಿಮ ಪಂದ್ಯದಲ್ಲೂ ಇದೇ ತೀವ್ರತೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಡ್ರೆಸ್ಸಿಂಗ್ ಕೊಠಡಿಯಲ್ಲಿ ಅನೇಕ ಮಂದಿ ಪ್ರತಿಭೆಗಳಿದ್ದಾರೆ. ಇಂದು ಎಲ್ಲರು ಉತ್ತಮ ಪ್ರದರ್ಶನ ನೀಡಿದರು. ನಾವೀಗ ಗ್ರೂಪ್ ವಿಭಾಗದಲ್ಲಿ ಒಂದು ಗೆಲುವು ದಾಖಲಿಸಿದ್ದು, ಮುಂದಿನ ಪಂದ್ಯದಲ್ಲೂ ಇದೇ ತೀವ್ರತೆಯನ್ನು ಉಳಿಸಿಕೊಳ್ಳಬೇಕು. ಮೊದಲ ಆರು ಓವರುಗಳಲ್ಲಿ ಬ್ರೆಟ್ ಲೀ ಹಾಗೂ ಜಾಕ್ವಾಸ್ ಕಾಲಿಸ್ ಅತ್ಯುತ್ತಮ ದಾಳಿ ಸಂಘಟಿಸಿದರು. ಆದರೆ ಸ್ಲಾಗ್ ಓವರುಗಳ ಪ್ರದರ್ಶನ ಆತಂಕಕ್ಕೆ ಕಾರಣವಾಗಿದೆ ಎಂದರು.

ತಮ್ಮದೇ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಕೇಳಿದ ಪ್ರಶ್ನೆಯೇ ಮುಸಿನಗುವಿನೊಂದಿಗೆ ಉತ್ತರಿಸಿದ ಗಂಭೀರ್, ಸ್ವಲ್ಪ ಹೊತ್ತಿಗೊಮ್ಮೆ ಇಂತಹ ಇನ್ನಿಂಗ್ಸ್ ಆಡಭಲ್ಲೆ ಎಂದಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಗೌತಿ ಬಿರುಸಿನ ಅರ್ಧಶತಕದ ನೆರವಿನಿಂದ ತಂಡಕ್ಕೆ ಗೆಲುವು ದಾಖಲಿಸಿತ್ತು.

ಪಂದ್ಯ ಪುರುಷೋತ್ತಮ ಪ್ರಶಸ್ತಿ ಸ್ವೀಕರಿಸುತ್ತಾ ಮಾತಾನಾಡಿದ ಜಾಕ್ವಾಸ್ ಕಾಲಿಸ್, ಕಳೆದೆರಡು ಪಂದ್ಯಗಳ ಕೆಟ್ಟ ಪ್ರದರ್ಶನದ ನಂತರ ಹಿರಿಯ ಆಟಗಾರರು ಜತೆಯಾಗಿ ಉತ್ತಮ ನಿರ್ವಹಣೆ ನೀಡಿದ್ದಾರೆ ಎಂದಿದ್ದಾರೆ.

ಗಂಭೀರ್ ಮಹತ್ತರ ಆಟಗಾರ. ಗಾಯದಿಂದಾಗಿ ಅರ್ಹತಾ ಸುತ್ತಿನಲ್ಲಿ ಅವರ ಸೇವೆ ಕಳೆದುಕೊಂಡಿದ್ದೆವು. ಆದರೆ ಇದೀಗ ತಂಡಕ್ಕೆ ಮರಳಿರುವುದು ಶ್ರೇಷ್ಠ ಅನುಭವವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವ ವಿಶ್ವಾಸವನ್ನು ಕ್ಯಾಲಿಸ್ ವ್ಯಕ್ತಪಡಿಸಿದರು. ವಾರಿಯರ್ಸ್ ವಿರುದ್ಧದ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಉತ್ತಮ ರನ್‌ರೇಟ್ ಕಾಯ್ದುಕೊಳ್ಳಬೇಕಾಗಿದೆ ಎಂದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ