ಇಲ್ಲೂ ತಪ್ಪಾಗಿದೆ, ತಿದ್ದಿಕೊಳ್ಳಿ; ಗಾಯವನ್ನು ತಪ್ಪಿಸಿ: ಧೋನಿ ಸಲಹೆ

ಗುರುವಾರ, 9 ಫೆಬ್ರವರಿ 2012 (09:40 IST)
WD
ತ್ರಿಕೋನ ಏಕದಿನ ಸರಣಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ತಪ್ಪು ಎಸಗಿದ್ದೇವೆ ಎಂಬುದನ್ನು ಒಪ್ಪಿಕೊಂಡಿರುವ ಭಾರತ ನಾಯಕ ಮಹೇಂದ್ರ ಸಿಂಗ್ ಧೋನಿ, ಮುಂದಿನ ಪಂದ್ಯಗಳಲ್ಲಿ ತಪ್ಪು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಹ ಆಟಗಾರರಿಗೆ ಸಲಹೆ ಮಾಡಿದ್ದಾರೆ.

ಅದೇ ರೀತಿ ಗಾಯಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಆಟಗಾರರು ಎಚ್ಚರಿಕೆಯಿಂದರಬೇಕು ಎಂದು ನಾಯಕ ಸೂಚನೆ ನೀಡಿದ್ದಾರೆ. ಲಂಕಾ ವಿರುದ್ಧದ ತ್ರಿಕೋನ ಏಕದಿನ ಸರಣಿಯ ಪಂದ್ಯವನ್ನು ನಾಲ್ಕು ವಿಕೆಟುಗಳ ಅಂತರದಿಂದ ಗೆದ್ದುಕೊಂಡಿದ್ದ ಭಾರತ ಅಂಕಪಟ್ಟಿಯಲ್ಲಿ ಖಾತೆ ತೆರೆದುಕೊಂಡಿತ್ತು.

77 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ರನೌಟ್ ಬಲೆಗೆ ಸಿಲುಕಿದ್ದರು. ಆದರೆ ಸಮಕಾಲೀನ ಕ್ರಿಕೆಟ್‌ನಲ್ಲಿ ರನ್ನರ್ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ತಪ್ಪನ್ನು ಅರಿತು ಸ್ನಾಯು ಸೆಳೆತಕ್ಕೊಳಗಾಗದಂತೆ ತಮ್ಮನ್ನು ತಾವೇ ನೋಡಿಕೊಳ್ಳಬೇಕು ಎಂದು ಧೋನಿ ಸಲಹೆ ಮಾಡಿದ್ದಾರೆ.

ಈ ನಡುವೆ ಪಂದ್ಯ ಪುರುಷೋತ್ತಮ ಎನಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಪ್ರದರ್ಶನವನ್ನು ಧೋನಿ ಶ್ಲಾಘಿಸಿದ್ದಾರೆ. ಬೌಲರುಗಳು ಉತ್ತಮ ನಿರ್ವಹಣೆ ನೀಡಿದರು ಎಂದು ಧೋನಿ ಸೇರಿಸಿದರು.

ಪಂದ್ಯ ಸೋತರೂ ಗೆದ್ದರೂ ನಾನು ಯಾವತ್ತೂ ನಗುಮುಖದಿಂದಲೇ ಇರುತ್ತೇನೆ. ಆದರೆ ವಿಜೇತ ತಂಡದ ಭಾಗಿಯಾಗುವುದು ಉತ್ತಮ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ