ಈಡನ್ ಗಾರ್ಡನ್ ನನ್ನ ಅಮ್ಮನ ತರಹ : ಹರಭಜನ್

ಬುಧವಾರ, 12 ಮಾರ್ಚ್ 2014 (11:48 IST)
PTI
ಕೋಲಕಾತಾ ದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ "ಈ ಮೈದಾನ ನನಗೆ ತಾಯಿ ಇದ್ದಂತೆ, ಯಾವಾಗಲೂ ತನ್ನ ಮಗನಿಗೆ ಏನಾದರೂ ಕೊಡುತ್ತಿರುತ್ತಾಳೆ ಎಂದು ಹೇಳಿದ್ದಾರೆ. ಪಂಜಾಬ್ ಗಾಗಿ ವಿಜಯ್ ಹಜಾರೆ ಟ್ರೋಫಿ ಗೆಲ್ಲಲು ಪ್ರಯತ್ನಿಸುತ್ತಿರುವ ಅವರು ಎಂದಿನಂತೆ ಈ ಸಲವೂ ಮೈದಾನ ತನ್ನ ಪಾಲಿಗೆ ವಿಶೇಷ ಎಂದು ಸಾಬೀತಾಗಲಿದೆ" ಎಂದು ಆಶಿಸಿದರು.

ಪ್ರಸ್ತುತ ದೇಶೀಯ ಏಕದಿನ ಪಂದ್ಯಾವಳಿಯಲ್ಲಿ, ತಮ್ಮ ರಾಜ್ಯದ ನೇತೃತ್ವ ವಹಿಸಿರುವ ಹರಭಜನ್ ಅವರ ತಂಡದ ಧನಾತ್ಮಕ ಫಲಿತಾಂಶಗಳನ್ನು ಪಡೆಯುವ ಭರವಸೆ ಹೊಂದಿದ್ದಾರೆ. ರೇಲ್ವೆ ತಂಡದ ವಿರುದ್ಧ ನಿನ್ನೇ ನಡೆದ ಕ್ವಾರ್ಟರ್ ಫೈನಲ್ ಪಂದ್ಯಕ್ಕೂ ಮುನ್ನ ಸಿಂಗ್ ವರದಿಗಾರರ ಜತೆ ಮಾತನಾಡುತ್ತಿದ್ದರು.


"ನಾನು ಈಡನ್ ನಿಂದ ಬರಿಗೈಯಿಂದ ಹಿಂತಿರುಗಿದ್ದುದೇ ಇಲ್ಲ. ಇದು ನನಗೆ ತುಂಬಾ ವಿಶೇಷ ಮತ್ತು ನನ್ನ ಹೃದಯದ ಸನಿಹದಲ್ಲಿದೆ. ನಾನು ಭಾರತ , ಮುಂಬೈ ಇಂಡಿಯನ್ಸ್ ಅಥವಾ ಯಾವುದೇ ತಂಡದ ಪರ ಆಡಿದರೂ ಈಡನ್ ನನಗೆ ಎಲ್ಲವನ್ನೂ ನೀಡಿದೆ .ಇದು ನನಗೆ ತಾಯಿಯಿದ್ದಂತೆ. ಈ ಸಲವೂ ಇದು ನನಗೆ ವಿಶೇಷವಾಗಲಿದೆ" ಎಂದು ಆಶಿಸುತ್ತೇನೆ .

2001 ರಲ್ಲಿ ಈಡನ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಗಳನ್ನು ಪಡೆದುಕೊಂಡಿದ್ದ 13 ಹರ್ಭಜನ್ ಸಿಂಗ್ ಭಾರತ ಐತಿಹಾಸಿಕ ಟೆಸ್ಟ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಕಳೆದ ವರ್ಷದ ಐಪಿಎಲ್ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ್ನು ಸೋಲಿಸಿ ಮುಂಬೈ ಇಂಡಿಯನ್ಸ್ ಪ್ರಶಸ್ತಿಯನ್ನು ಗೆದ್ದಿತ್ತು.

ವೆಬ್ದುನಿಯಾವನ್ನು ಓದಿ