ಎರಡು ಚೆಂಡುಗಳ ಬಳಕೆಯಿಂದ ಸ್ವಿಂಗ್ ಬೌಲರುಗಳಿಗೆ ಲಾಭ: ಕಪಿಲ್ ದೇವ್

ಬುಧವಾರ, 12 ಅಕ್ಟೋಬರ್ 2011 (09:15 IST)
ಬಹುತೇಕ ಎರಡು ದಶಕಗಳ ನಂತರ ಏಕದಿನ ಮಾದರಿಯಲ್ಲಿ ಎರಡು ಬಿಳಿ ಚೆಂಡುಗಳ ಬಳಕೆಗೆ ಐಸಿಸಿ ಗ್ರೀನ್ ಸಿಗ್ನಿಲ್ ನೀಡಿದೆ. ಇದರಂತೆ ಅಕ್ಟೋಬರ್ 14ರಿಂದ ಆರಂಭವಾಗಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಸರಣಿಯಲ್ಲಿ ನಿಯಮವು ಆಳವಡಿಕೆಯಾಗಲಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಬಗ್ಗೆ ಕ್ರಿಕೆಟ್ ಪಂಡಿತರು ವಿಭಿನ್ನ ಅಭಿಮತವನ್ನು ವ್ಯಕ್ತಪಡಿಸುತ್ತಿದ್ದಾರೆ. ಸ್ವಿಂಗ್ ದಾಳಿಗಳನ್ನೇ ಅವಲಂಬಿಸಿರುವ ಮಧ್ಯಮ ಗತಿಯ ವೇಗದ ಬೌಲರುಗಳಿಗೆ ಈ ಹೊಸ ನಿಯಮವು ನೆರವಾಗಲಿದೆ ಎಂದು ಹೇಳಲಾಗಿದೆ. ಅದೇ ಹೊತ್ತಿಗೆ ಹಾರ್ಡ್ ಹಿಟ್ಟರ್ ಬ್ಯಾಟ್ಸ್‌ಮನ್‌ಗಳಿಗೂ ನೆರವು ನೀಡಲಾಗಿದೆ ಎಂದು ಅಭಿಪ್ರಾಯಪಡಲಾಗಿದೆ.

ಯಾರು ಅತಿ ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ ಎಂಬುದು ಹೇಳುವುದು ಕಷ್ಟ. ಆದರೆ ಸ್ವಿಂಗ್ ಬೌಲರುಗಳಿಗೆ ಲಾಭವಾಗಬಹುದು ಎಂಬುದು ನನ್ನ ಅಭಿಪ್ರಾಯ. ಸಾಮಾನ್ಯವಾಗಿ ಬಿಳಿ ಚೆಂಡು ಆರಂಭದಲ್ಲೇ ಹೊಳಪನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳಿಗೂ ಹೆಚ್ಚು ರನ್ ಗಳಿಸಲು ನೆರವಾಗಬಹುದು ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ಹಿಂದಿನ ಕಾಲದಲ್ಲಿ ಎರಡು ಹೊಸ ಚೆಂಡುಗಳಲ್ಲಿ ಆಡಲಾಗುತ್ತಿತ್ತು. ಚೆಂಡು ವೇಗವಾಗಿ ಚಲಿಸುವುದರಿಂದ ಬ್ಯಾಟ್ಸ್‌ಮನ್‌ಗಳಿಗೂ ನೆರವು ನೀಡುತ್ತಿತ್ತು. ಆದರೆ ಈಗಿನ ಪವರ್-ಪ್ಲೇ ಮಾದರಿ ಆಟದಲ್ಲಿ ಇದು ಮತ್ತಷ್ಟು ಕುತೂಹಲಕಾರಿ ಎನಿಸಿಕೊಳ್ಳಲಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಬ್ಬ ಮಾಜಿ ಆಲ್‌ರೌಂಡರ್ ಆಟಗಾರ ಮನೋಜ್ ಪ್ರಭಾಕರ್ ಪ್ರಕಾರ, ಇದು ಬೌಲರುಗಳಿಗೆ ಸಿಹಿ ಸುದ್ದಿ. ಇದರಿಂದಸ್ವಿಂಗ್ ಬೌಲರುಗಳಿಗೆ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚು ಒತ್ತಡ ಹೇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಕ್ರಿಕೆಟ್‌ಗೆ ಮತ್ತಷ್ಟು ಆಕರ್ಷಣೆ ತರುವ ನಿಟ್ಟಿನಲ್ಲಿ ಏಕದಿನ ಮಾದರಿಯಲ್ಲಿ ಎರಡು ಬದಿಗಳಿಂದಲೂ ಹೊಸ ಚೆಂಡನ್ನು ಆಳವಡಿಸಲು ಐಸಿಸಿ ನಿರ್ಧರಿಸಿತ್ತು.

ವೆಬ್ದುನಿಯಾವನ್ನು ಓದಿ