ಏಕದಿನಕ್ಕೆ ಸಚಿನ್ ನಿವೃತ್ತಿ ಘೋಷಿಸಬೇಕು: ಅಕ್ರಂ

ಬುಧವಾರ, 29 ಫೆಬ್ರವರಿ 2012 (10:11 IST)
PTI
ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಅವರು ಏಕದಿನ ಮಾದರಿಯ ಆಟಕ್ಕೆ ನಿವೃತ್ತಿ ಘೋಷಿಸಬೇಕು ಎಂದು ಬಯಸಿರುವ ಪಾಕಿಸ್ತಾನದ ಮಾಜಿ ನಾಯಕ ವಾಸೀಮ್ ಅಕ್ರಂ, ಟೆಸ್ಟ್ ಕ್ರಿಕೆಟ್‌ನತ್ತ ಹೆಚ್ಚು ಗಮನ ಕೊಡಬೇಕು ಎಂದು ಸಲಹೆ ಮಾಡಿದ್ದಾರೆ.

ಸಚಿನ್ ಎಷ್ಟೇ ಕೆಟ್ಟ ಪ್ರದರ್ಶನ ನೀಡಿದರೂ ಅವರನ್ನು ತಂಡದಿಂದ ಕೈಬಿಡಲು ಭಾರತೀಯ ಆಯ್ಕೆಗಾರರು ಧೈರ್ಯ ಮಾಡಲ್ಲ ಎಂದಿರುವ ಅಕ್ರಂ, ಆಯ್ಕೆ ಸುಲಭವಾಗುವ ನಿಟ್ಟಿನಲ್ಲಿ ಸಚಿನ್ ತಮ್ಮ ನಿವೃತ್ತಿಯನ್ನು ಪ್ರಕಟಿಸಬೇಕು ಎಂದಿದ್ದಾರೆ.

ಐತಿಹಾಸಿಕ 100ನೇ ಶತಕದ ಬಗ್ಗೆ ಆತಂಕಪಡುವ ಯಾವುದೇ ಅಗತ್ಯವಿಲ್ಲ ಎಂದು ಸಚಿನ್‌ಗೆ ಸಲಹೆ ಮಾಡಿರುವ ಅಕ್ರಂ, ಐದು ದಿನಗಳ ಆಟದಲ್ಲಿ ಇನ್ನು ಹಲವಾರು ಶತಕಗಳನ್ನು ಬಾರಿಸಬಹುದು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ