ಏಕದಿನ ಸರಣಿ: ಲಂಕಾ ವಿರುದ್ಧ ವಿಂಡೀಸ್‌ಗೆ ಗೆಲುವು

ಭಾನುವಾರ, 30 ಜೂನ್ 2013 (10:33 IST)
PTI
ಆರಂಭಿಕ ಆಟಗಾರ ಕ್ರಿಸ್‌ ಗೇಲ್‌ ಅವರ ಸ್ಫೋಟಕ ಶತಕದಿಂದಾಗಿ ಆತಿಥೇಯ ವೆಸ್ಟ್‌ಇಂಡೀಸ್‌ ತಂಡವು ತ್ರಿಕೋನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಆರು ವಿಕೆಟ್‌ಗಳ ಸುಲಭ ಜಯ ಸಾಧಿಸಿ ಶುಭಾರಂಭಗೈದಿದೆ.

ಶಕ್ತಿಶಾಲಿ ಹೊಡೆತಗಳ ಗೇಲ್‌ ಅವರ ಅಮೋಘ ಆಟದಿಂದಾಗಿ ವೆಸ್ಟ್‌ಇಂಡೀಸ್‌ ತಂಡವು ಕೇವಲ 37.5 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ಕಳೆದುಕೊಂಡು ಜಯಭೇರಿ ಮೊಳಗಿಸಿತು. ಸಬೀನಾ ಪಾಕ್‌ನಲ್ಲಿ ತಾಯ್ನಾಡ ಪ್ರೇಕ್ಷಕರೆದುರು ಬೌಂಡರಿ ಸಿಕ್ಸರ್‌ಗಳ ಸುರಿಮಳೆಗೈದು ರಂಜಿಸಿದ ಗೇಲ್‌ ಕೇವಲ 100 ಎಸೆತಗಳಲ್ಲಿ 109 ರನ್‌ ಹೊಡೆದರು. ಇದು ಅವರ ಏಕದಿನ ಕ್ರಿಕೆಟ್‌ ಬಾಳ್ವೆಯ 21ನೇ ಹಾಗೂ ಶ್ರೀಲಂಕಾ ಪರ ಮೊದಲ ಶತಕವಾಗಿದೆ. 9 ಬೌಂಡರಿ ಮತ್ತು 7 ಸಿಕ್ಸರ್‌ ಸಿಡಿಸಿದ ಅವರು ಮೊದಲ ವಿಕೆಟಿಗೆ ಜಾನ್ಸನ್‌ ಚಾರ್ಲ್ಸ್‌ ಜತೆ 115 ರನ್‌ ಪೇರಿಸಿದ್ದರು.

ಗೇಲ್‌ ಔಟಾದ ವೇಳೆ ವಿಂಡೀಸ್‌ ಗೆಲುವಿಗೆ ಇನ್ನುಳಿದ 19 ಓವರ್‌ಗಳಿಂದ 28 ರನ್‌ ಗಳಿಸಬೇಕಾಗಿತ್ತು. ಆದರೂ ತಂಡ 2 ವಿಕೆಟ್‌ ಕಳೆದುಕೊಂಡಿತು. ಆದರೆ ನಾಯಕ ಡ್ವೇಯ್ನ ಬ್ರಾವೊ ಮತ್ತು ಮಾರ್ಲಾನ್‌ ಸಾಮ್ಯುಯೆಲ್ಸ್‌ ಇನ್ನಷ್ಟು ಕುಸಿತ ಕಾಣದಂತೆ ನೋಡಿಕೊಂಡು ಬೋನಸ್‌ ಅಂಕ ಪಡೆದು ಗೆಲುವು ಪಡೆದು ಸಂಭ್ರಮಿಸಿತು.

ಇಬ್ಬರ ಅರ್ಧಶತಕ

ಒಂದು ಕಡೆಯಿಂದ ವಿಕೆಟ್‌ ಉರುಳುತ್ತಿದ್ದರೂ ಮಾಹೇಲ ಜಯವರ್ಧನ ಮತ್ತು ನಾಯಕ ಏಂಜೆಲೊ ಮ್ಯಾಥ್ಯೂಸ್‌ ಅವರ ಜವಾಬ್ದಾರಿಯ ಆಟದಿಂದಾಗಿ ಶ್ರೀಲಂಕಾ ಸಾಧಾರಣ ಮೊತ್ತ ಪೇರಿಸುವಂತಾಯಿತು. ಜಯವರ್ಧನ ಮತ್ತು ಮ್ಯಾಥ್ಯೂಸ್‌ ಅರ್ಧಶತಕ ಸಿಡಿಸಿದ್ದರು.

ಶ್ರೀಲಂಕಾದ ಆರಂಭ ಉತ್ತಮವಾಗಿತ್ತು. ಉಪುಲ್‌ ತರಂಗ ಮತ್ತು ಜಯವರ್ಧನ ಮೊದಲ ವಿಕೆಟಿಗೆ 62 ರನ್‌ ಪೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಆಬಳಿಕ ಸಂಗಕ್ಕರ, ಚಾಂಡಿಮಾಲ್‌ ಉತ್ತಮ ಮೊತ್ತ ಪೇರಿಸಲು ವಿಫ‌ಲರಾದರು. ಜಯವರ್ಧನ ಎಸೆತಕ್ಕೊಂದರಂತೆ 52 ರನ್‌ ಹೊಡೆದರೆ ಮ್ಯಾಥ್ಯೂಸ್‌ 77 ಎಸೆತಗಳಿಂದ 55 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಹಠಾತ್‌ ಕುಸಿತ

ಸುನೀಲ್‌ ನರೈನ್‌ ಮತ್ತು ರಾಮ್‌ಪಾಲ್‌ ದಾಳಿಗೆ ಹಠಾತ್‌ ಕುಸಿತ ಕಂಡ ಲಂಕಾ ತಂಡವು 57 ರನ್‌ ಅಂತರದಲ್ಲಿ ಅಂತಿಮ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಸುನೀಲ್‌ ನಾರಾಯಣ್‌ 40 ರನ್ನಿಗೆ 4 ವಿಕೆಟ್‌ ಪಡೆದರೆ ರಾಮ್‌ಪಾಲ್‌ 38 ರನ್ನಿಗೆ 3 ವಿಕೆಟ್‌ ಕಿತ್ತರು. ನಾಯಕ ಬ್ರಾವೊ 37 ರನ್ನಿಗೆ 2 ವಿಕೆಟ್‌ ಪಡೆದರು.

ಸ್ಕೋರುಪಟ್ಟಿ

ಶ್ರೀಲಂಕಾ

ಉಪುಲ್‌ ತರಂಗ ಸಿ ರಾಮ್‌ದಿನ್‌ ಬಿ ಬ್ರಾವೊ 25

ಎಂ. ಜಯವರ್ಧನ ಸಿ ರಾಮ್‌ದಿನ್‌ ಬಿ ನಾರಾಯಣ್‌ 52

ಕುಮಾರ ಸಂಗಕ್ಕರ ಸಿ ಪೊಲಾರ್ಡ್‌ ಬಿ ನಾರಾಯಣ್‌ 17

ದಿನೇಶ್‌ ಚಾಂಡಿಮಾಲ್‌ ಸಿ ಬ್ರಾವೊ ಬಿ ಸಾಮ್ಯುಯೆಲ್ಸ್‌ 21

ಏ. ಮ್ಯಾಥ್ಯೂಸ್‌ ಔಟಾಗದೆ 55

ಲಹಿರು ತಿರಿಮನ್ನೆ ಸಿ ಚಾರ್ಲ್ಸ್‌ ಬಿ ರಾಮ್‌ಪಾಲ್‌ 6

ನುವನ್‌ ಕುಲಶೇಖರ ಸಿ ಪೊಲಾರ್ಡ್‌ ಬಿ ರಾಮ್‌ಪಾಲ್‌ 2

ಜೀವನ್‌ ಮೆಂಡಿಸ್‌ ಸಿ ಸಾಮ್ಯುಯೆಲ್ಸ್‌ ಬಿ ನಾರಾಯಣ್‌ 5

ರಂಗನ ಹೆರಾತ್‌ ಸಿ ಸಮ್ಮಿ ಬಿ ರಾಮ್‌ಪಾಲ್‌ 4

ಲಸಿತ ಮಾಲಿಂಗ ಎಲ್‌ಬಿಡಬ್ಲ್ಯು ನಾರಾಯಣ್‌ 8

ಅಜಂತ ಮೆಂಡಿಸ್‌ ಸಿ ಚಾರ್ಲ್ಸ್‌ ಬಿ ಬ್ರಾವೊ 2

ಇತರ: 11

ಒಟ್ಟು (48.3 ಓವರ್‌ಗಳಲ್ಲಿ ಆಲೌಟ್‌) 208

ವಿಕೆಟ್‌ ಪತನ: 1-62, 2-85, 3-104, 4-140, 5-151, 6-159, 7-176, 8-190, 9-205

ಬೌಲಿಂಗ್‌:

ಕೆಮರ್‌ ರೋಶ್‌ 7-1-41-0

ರವಿ ರಾಮ್‌ಪಾಲ್‌ 10-0-38-3

ಡ್ಯಾರನ್‌ ಸಮ್ಮಿ 10-0-34-0

ಡ್ವೇಯ್ನ ಬ್ರಾವೊ 7.3-0-37-2

ಸುನೀಲ್‌ ನಾರಾಯಣ್‌ 10-0-40-4

ಮಾರ್ಲಾನ್‌ ಸಾಮ್ಯುಯೆಲ್ಸ್‌ 4-1-11-1

ವೆಸ್ಟ್‌ಇಂಡೀಸ್‌

ಕ್ರಿಸ್‌ ಗೇಲ್‌ ಸಿ ಚಾಂಡಿಮಾಲ್‌ ಬಿ ಅಜಂತ 109

ಜಾನ್ಸನ್‌ ಚಾರ್ಲ್ಸ್‌ ಸಿ ಮಾಹೇಲ ಬಿ ಹೆರಾತ್‌ 29

ಡ್ಯಾರನ್‌ ಬ್ರಾವೊ ರನೌಟ್‌ 27

ಎಂ. ಸಾಮ್ಯುಯೆಲ್ಸ್‌ ಔಟಾಗದೆ 15

ಕೈರನ್‌ ಪೊಲಾರ್ಡ್‌ ಎಲ್‌ಬಿಡಬ್ಲ್ಯು ಕುಲಶೇಖರ 0

ಡ್ವೇಯ್ನ ಬ್ರಾವೊ ಔಟಾಗದೆ 8

ಇತರ: 21

ಒಟ್ಟು (37.5 ಓವರ್‌ಗಳಲ್ಲಿ 4 ವಿಕೆಟಿಗೆ) 209

ವಿಕೆಟ್‌ ಪತನ: 1-115, 2-181, 3-190, 4-193

ಬೌಲಿಂಗ್‌:

ಲಸಿತ ಮಾಲಿಂಗ 7-0-34-0

ನುವನ್‌ ಕುಲಶೇಖರ 8-1-39-1

ಅಜಂತ ಮೆಂಡಿಸ್‌ 10-0-53-1

ಏಂಜೆಲೊ ಮ್ಯಾಥ್ಯೂಸ್‌ 5-0-28-0

ರಂಗನ ಹೆರಾತ್‌ 6-0-37-1

ಜೀವನ್‌ ಮೆಂಡಿಸ್‌ 1.5-1-7-0

ಪಂದ್ಯಶ್ರೇಷ್ಠ: ಕ್ರಿಸ್‌ ಗೇಲ್‌

ಎಕ್ಸ್‌ಟ್ರಾ ಇನ್ನಿಂಗ್ಸ್‌ (ವೆಸ್ಟ್‌ಇಂಡೀಸ್‌-ಶ್ರೀಲಂಕಾ)

* ಏಕದಿನ ಕ್ರಿಕೆಟ್‌ನಲ್ಲಿ ಕ್ರಿಸ್‌ ಗೇಲ್‌ ದಾಖಲೆ 21ನೇ ಮತ್ತು ಶ್ರೀಲಂಕಾ ವಿರುದ್ಧ ಮೊದಲ ಶತಕ ದಾಖಲಿಸಿದರು. ಹರ್ಶಲ್‌ ಗಿಬ್ಸ್ ಸಹ 21 ಶತಕ ದಾಖಲಿಸಿದ್ದರೆ ತೆಂಡುಲ್ಕರ್‌ (49), ರಿಕಿ ಪಾಂಟಿಂಗ್‌ (30), ಸನತ್‌ ಜಯಸೂರ್ಯ (28) ಮತ್ತು ಸೌರವ್‌ ಗಂಗೂಲಿ (22) ಮೊದಲ ನಾಲ್ಕು ಸ್ಥಾನಗಳಲ್ಲಿದ್ದಾರೆ.

* 2009ರ ಜೂನ್‌ 28ರ ಬಳಿಕ ಜಮೈಕಾದ ಕಿಂಗ್ಸ್‌ಸನ್‌ನ ಸಬೀನಾ ಪಾರ್ಕ್‌ನಲ್ಲಿ ವೆಸ್ಟ್‌ಇಂಡೀಸ್‌ ಸತತ ಏಳನೇ ಪಂದ್ಯದಲ್ಲಿ ಜಯ ಸಾಧಿಸಿದೆ. ಈ ಸಾಧನೆಯನ್ನು ವಿಂಡೀಸ್‌ ಎರಡನೇ ಸಲ ಮಾಡಿದೆ.

* ಕಿಂಗ್ಸ್‌ಟನ್‌ನಲ್ಲಿ ನಡೆದ 30 ಪಂದ್ಯಗಳಲ್ಲಿ ವೆಸ್ಟ್‌ಇಂಡೀಸ್‌ 22 ಪಂದ್ಯಗಳಲ್ಲಿ ಜಯ ಸಾಧಿಸಿ ಉತ್ತಮ ಸಾಧನೆ ಮಾಡಿದೆ. ಏಳು ಪಂದ್ಯಗಳಲ್ಲಿ ಸೋತಿದ್ದರೆ ಒಂದು ಪಂದ್ಯದಲ್ಲಿ ಫ‌ಲಿತಾಂಶ ಬರಲಿಲ್ಲ.

* ವೆಸ್ಟ್‌ಇಂಡೀಸ್‌ನಲ್ಲಿ ಆಡಿದ 98 ಪಂದ್ಯಗಳಲ್ಲಿ ಇದು ಗೇಲ್‌ ಅವರ ಐದನೇ ಶತಕವಾಗಿದೆ. ದಕ್ಷಿಣ ಆಫ್ರಿಕಾ, ನ್ಯೂಜಿಲಂಡ್‌, ಪಾಕಿಸ್ಥಾನ, ಭಾರತ ಮತ್ತು ಶ್ರೀಲಂಕಾ ವಿರುದ್ಧ ತಲಾ ಒಂದು ಶತಕ ದಾಖಲಿಸಿದ್ದಾರೆ.

* ಗೇಲ್‌ ಶತಕ ದಾಖಲಿಸಿದ ವೇಳೆ ವೆಸ್ಟ್‌ಇಂಡೀಸ್‌ ಆಡಿದ 21 ಪಂದ್ಯಗಳಲ್ಲಿ 12ರಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದ ಪಂದ್ಯಗಳಲ್ಲಿ ಶತಕ ದಾಖಲಿಸಿದ್ದರೂ ವಿಂಡೀಸ್‌ ಸೋತಿದೆ.

* ಕಿಂಗ್ಸ್‌ಟನ್‌ನಲ್ಲಿ ಮೂರನೇ ಶತಕ ದಾಖಲಿಸಿದ ಗೇಲ್‌ ಅವರು ಏಕದಿನದಲ್ಲಿ ಈ ಮೈದಾನದಲ್ಲಿ ಗರಿಷ್ಠ ಶತಕ ದಾಖಲಿಸಿದ ಕ್ರಿಕೆಟಿಗ ಎಂದೆನಿಸಿಕೊಂಡರು. ಚಂದರ್‌ಪಾಲ್‌ 2 ಶತಕ ದಾಖಲಿಸಿದ್ದಾರೆ.

* ಶತಕ ದಾಖಲಿಸುವ ವೇಳೆ 7 ಸಿಕ್ಸ್‌ ಬಾರಿಸುವ ಮೂಲಕ ಗೇಲ್‌ ಏಕದಿನ ಕ್ರಿಕೆಟ್‌ನಲ್ಲಿ 200 ಅಥವಾ ಅದಕ್ಕಿಂತ ಹೆಚ್ಚಿನ ಸಿಕ್ಸರ್‌ ಬಾರಿಸಿದ ಮೂರನೇ ಆಟಗಾರ ಎಂಬ ಗೌರವ ಪಡೆದರು. ಶಾಹಿದ್‌ ಅಫ್ರಿದಿ (308) ಮತ್ತು ಜಯಸೂರ್ಯ (270), ಗೇಲ್‌ (202), ತೆಂಡುಲ್ಕರ್‌ (195) ಮತ್ತು ಗಂಗೂಲಿ (190) ಗರಿಷ್ಠ ಸಿಕ್ಸರ್‌ ಬಾರಿಸಿದ ಅಗ್ರ ಐವರು ಆಟಗಾರರಾಗಿದ್ದಾರೆ.

* 21ನೇ ಶತಕ ದಾಖಲಿಸಿದ ಗೇಲ್‌ ಏಕದಿನದಲ್ಲಿ 22ನೇ ಮತ್ತು ಶ್ರೀಲಂಕಾ ಪರ ಮೊದಲ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

* ಏಕದಿನದಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಮಾಹೇಲ ಜಯವರ್ಧನ ಉತ್ತಮ ದಾಖಲೆ ಹೊಂದಿದ್ದಾರೆ. ಆಡಿದ 21 ಪಂದ್ಯಗಳಿಂದ ಒಂದು ಶತಕ ಮತ್ತು ಐದು ಅರ್ಧಶತಕ ಸೇರಿದಂತೆ 669 ರನ್‌ ಗಳಿಸಿದ್ದಾರೆ.

* ಕುಮಾರ ಸಂಗಕ್ಕರ ಏಕದಿನ ಕ್ರಿಕೆಟ್‌ನಲ್ಲಿ 11 ಸಾವಿರ ರನ್‌ ಪೂರ್ತಿಗೊಳಿಸಿದರು. ಆಡಿದ 338 ಪಂದ್ಯಗಳಿಂದ ಸರಾಸರಿ 38.89ರಂತೆ ಅವರು 11,006 ರನ್‌ ಗಳಿಸಿದ್ದಾರೆ.

* ಏಂಜೆಲೊ ಮ್ಯಾಥ್ಯೂಸ್‌ ಏಕದಿನ ಪರ 15ನೇ ಮತ್ತು ವೆಸ್ಟ್‌ಇಂಡೀಸ್‌ ವಿರುದ್ಧ ಮೊದಲ ಅರ್ಧಶತಕ ಹೊಡೆದರು.

* ಸುನೀಲ್‌ ನಾರಾಯಣ್‌ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌ ಪಡೆದ ವೇಳೆ ವೆಸ್ಟ್‌ಇಂಡೀಸ್‌ ಎಲ್ಲ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ.

* ನ್ಯೂಜಿಲಂಡ್‌, ಆಸ್ಟ್ರೇಲಿಯ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ನಾರಾಯಣ್‌ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ