ಐಪಿಎಲ್‌ನತ್ತ ಗಿಲ್‌ಕ್ರಿಸ್ಟ್ ಚಿತ್ತ

ಸೋಮವಾರ, 28 ಜನವರಿ 2008 (15:02 IST)
ನಿವೃತ್ತಿಯ ಅಂಚಿಗೆ ಸರಿದಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಅಡಂ ಗಿಲ್‌ಕ್ರಿಸ್ಟ್ ಅವರು ನಿವೃತ್ತಿಯ ನಂತರ ತಮ್ಮ ಸಹ ಕ್ರಿಕೆಟಿಗರಿಗಿಂತ ಹೆಚ್ಚು ಆದಾಯಗಳಿಸಲು ಮುಂದಾಗಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯದೊಂದಿಗೆ ಇರುವ ಗುತ್ತಿಗೆಯಡಿಯಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್‌ನಲ್ಲಿ ಆಡಲಿದ್ದಾರೆ.

ಮಾರ್ಚ್ ಅಥವಾ ಎಪ್ರಿಲ್ ತಿಂಗಳಿನಲ್ಲಿ ಆಸ್ಟ್ರೇಲಿಯ ಪ್ರವಾಸ ಕೈಗೊಂಡಲ್ಲಿ ತಂಡದ ಅಗ್ರ ಕ್ರಿಕೆಟಿಗರು ಪ್ರವಾಸ ಶುಲ್ಕ ರೂಪದಲ್ಲಿ 1.20 ಲಕ್ಷ ಡಾಲರ್ ಪಡೆಯಬಹದು. ಎಪ್ರಿಲ್ 18ರಿಂದ ಪ್ರಾರಂಭವಾಗಲಿರುವ ಐಪಿಎಲ್ ಲೀಗ್ ಕ್ರಿಕೆಟಿನಲ್ಲಿ ಆಡಲಿರುವ ಗಿಲ್‌ಕ್ರಿಸ್ಟ್, ಅವರಿಗಿಂತ ಹೆಚ್ಚಿಗೆ ಸಂಭಾವನೆ ಪಡೆಯುವ ಸಾಧ್ಯತೆ ಇದೆ.

ಹಣದ ಆಮೀಷಕ್ಕೆ ಬಲಿಯಾಗುವ ಕ್ರಿಕೆಟಿಗರು ಟ್ವೆಂಟಿ20 ಕ್ರಿಕೆಟ್ ಟೂರ್ನಿಗೆ ವಲಸೆ ಹೋಗುವ ಸಾಧ್ಯತೆ ಇದ್ದು, ಈ ರೀತಿಯ ವಲಸೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ತಮ್ಮ ಕ್ರಿಕೆಟ್ ಮಂಡಳಿಗಳಿಂದ ನಿರಪೇಕ್ಷಣಾ ಪತ್ರವನ್ನು ಲಗತ್ತಿಸಬೇಕು ಎಂದು ಕೇಳಿದೆ.

ಇಂಡಿಯನ್ ಕ್ರಿಕೆಟ್ ಲೀಗ್ ಸೇರಲಿರುವ ಅಡಂ ಗಿಲ್ ಕ್ರಿಸ್ಟ್ ಅವರ ಗುತ್ತಿಗೆ ವರ್ಷದ ಮಧ್ಯಾವಧಿಯವರೆಗೆ ಇರುವುದರಿಂದ ಅವರನ್ನು ಐಪಿಎಲ್‌ಗೆ ಬಿಟ್ಟುಕೊಡುವ ಕುರಿತು ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ.

ವೆಬ್ದುನಿಯಾವನ್ನು ಓದಿ