ಐಪಿಎಲ್‌ ಪಂದ್ಯಗಳ ಸ್ಥಳಾಂತರ ಇಲ್ಲ: ಬಿಸಿಸಿಐ

ಸೋಮವಾರ, 25 ಮಾರ್ಚ್ 2013 (12:03 IST)
PTI
ತಮಿಳುನಾಡಿನಲ್ಲಿ ಶ್ರೀಲಂಕಾ ವಿರೋಧ ಹೋರಾಟದ ನಡುವೆಯೂ ಚೆನ್ನೈನಲ್ಲಿ ನಿಗದಿಯಾಗಿರುವ ಐಪಿಎಲ್‌ ಪಂದ್ಯಗಳ ಸ್ಥಳಾಂತರ ಇಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ರತ್ನಾಕರ್‌ ಶೆಟ್ಟಿ, ಸದ್ಯದ ಪರಿಸ್ಥಿತಿಯಲ್ಲಿ ಚೆನ್ನೈನಲ್ಲಿ ನಿಗದಿಯಂತೆ ಪಂದ್ಯಗಳು ನಡೆಯಲಿವೆ. ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಯಾವುದೇ ಯೋಚನೆ ಇಲ್ಲ ಎಂದು ತಿಳಿಸಿದರು.

ಐಪಿಎಲ್‌ ಫ್ರಾಂಚೈಸಿಗಳು ತಮಿಳುನಾಡಿನ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಐಪಿಎಲ್‌ ಅಧ್ಯಕ್ಷ ರಾಜೀವ್‌ ಶುಕ್ಲ ಕೂಡ ಪ್ರತಿಕ್ರಿಯಿಸಿದ್ದು, ಚೆನ್ನೈನಲ್ಲಿ ಭದ್ರತಾ ವ್ಯವಸ್ಥೆಯ ಬಗ್ಗೆ ತೃಪ್ತಿ ಇದೆ. ಆದ್ದರಿಂದ ಪಂದ್ಯಗಳನ್ನು ಸ್ಥಳಾಂತರಗೊಳಿಸುವ ಯಾವುದೇ ವಿಚಾರ ನಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

ವೆಬ್ದುನಿಯಾವನ್ನು ಓದಿ