ಐಪಿಎಲ್ ಏಳನೇ ಆವೃತ್ತಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಸಾಧ್ಯತೆ

ಗುರುವಾರ, 13 ಫೆಬ್ರವರಿ 2014 (18:38 IST)
PR
PR
ಬೆಂಗಳೂರು:ಇಂಡಿಯನ್ ಪ್ರೀಮಿಯರ್ ಲೀಗ್ ಏಳನೇ ಆವೃತ್ತಿಯನ್ನು ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಮುಂಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಐಪಿಎಲ್‌ಗೆ ಭದ್ರತೆ ನೀಡುವುದು ಸಾಧ್ಯವಾಗದಿರುವುದರಿಂದ ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಬಹುದು ಎಂದು ಹೇಳಲಾಗುತ್ತಿದೆ. ಇಂಡಿಯನ್ ಪ್ರೀಮಿಯಂ ಲೀಗ್ ಅಧಿಕಾರಿಗಳು ಗೃಹಸಚಿವಾಲಯದ ಅಧಿಕಾರಿಗಳನ್ನು ಮುಂದಿನ ವಾರ ಭೇಟಿ ಮಾಡಿ ಸ್ಥಳದ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡು, ಮುಂದಿನ 10 ದಿನಗಳಲ್ಲಿ ನಿಖರ ವೇಳಾಪಟ್ಟಿಯನ್ನು ನಿಗದಿ ಮಾಡುವ ನಿರೀಕ್ಷೆಯಿದೆ. ಏಪ್ರಿಲ್-ಮೇನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲು ನಿಗದಿಯಾಗಿದೆ.ನಾವು ಅನೇಕ ಆಯ್ಕೆಗಳನ್ನು ಪರಿಗಣಿಸಿದ್ದೇವೆ.

ನಾವು ಗೃಹಸಚಿವಾಲಯದ ಅಧಿಕಾರಿಗಳನ್ನು ಮತ್ತು ಗೃಹಸಚಿವರನ್ನು ಭೇಟಿ ಮಾಡಿ ಭಾರತದಲ್ಲಿ ಆಡಲು ಸಂಭವನೀಯ ದಿನಾಂಕಗಳ ಬಗ್ಗೆ ಕೇಳಿದ್ದೇವೆ. ಭಾರತದಲ್ಲಿ ಸಾಧ್ಯವಾಗದಿದ್ದರೆ ದಕ್ಷಿಣ ಆಫ್ರಿಕಾಗೆ ನಮ್ಮ ಆದ್ಯತೆ. ಅಲ್ಲದೇ ಎರಡನೇ ಮತ್ತು ಮೂರನೇ ಆಯ್ಕೆ ಕೂಡ ಮುಕ್ತವಾಗಿದೆ ಎಂದು ಐಪಿಎಲ್ ಅಧ್ಯಕ್ಷ ರಂಜೀಬ್ ಬಿಸ್ವಾಲ್ ತಿಳಿಸಿದರು.

ವೆಬ್ದುನಿಯಾವನ್ನು ಓದಿ