ಐಪಿಎಲ್ ಡೋಪಿಂಗ್ ಟೆಸ್ಟ್‌: ಸಾಂಗ್ವಾನ್ ಅನುತ್ತೀರ್ಣ

ಶುಕ್ರವಾರ, 19 ಜುಲೈ 2013 (15:26 IST)
PR
PR
ಐಪಿಎಲ್ ಡೋಪಿಂಗ್ ಟೆಸ್ಟ್‌ನಲ್ಲಿ ಪ್ರದೀಪ್ ಸಾಂಗ್ವಾನ್ ಅನುತ್ತೀರ್ಣಗೊಂಡಿದ್ದಾರೆ , ಪರೀಕ್ಷೆಯ ವೇಳೆ ಉದ್ದೀಪನ ಔಷಧಿ ಸೇವಿಸಿದ ಪ್ರಕರಣ ಬೆಳಕಿಗೆ ಬಂದ ಕಾರಣ ಇವರನ್ನು ಅನರ್ಹಗೊಳಿಸಲಾಗಿದೆ .

22ರ ಹರೆಯದ ವೇಗಿ ಸಾಂಗ್ವಾನ್ 2008ರ ಅಂಡರ್ -19 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. ದಿಲ್ಲಿ ರಣಜಿ ತಂಡದ ಆಟಗಾರ ಸಾಂಗ್ವಾನ್ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು.

38 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಸಾಂಗ್ವಾನ್ 123 ವಿಕೆಟ್ ಸಂಪಾದಿಸಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಎರಡು ಪಂದ್ಯಗಳನ್ನು ಆಡಿದ್ದರೂ ಅವರಿಗೆ ವಿಕೆಟ್ ಸಿಕ್ಕಿರಲಿಲ್ಲ.

ವೆಬ್ದುನಿಯಾವನ್ನು ಓದಿ