ಐಪಿಎಲ್ ಪಂದ್ಯ ಆತಿಥ್ಯಕ್ಕೆ ಪುಣೆ ಸ್ಟೇಡಿಯಂ ಸಜ್ಜು

ಶನಿವಾರ, 31 ಮಾರ್ಚ್ 2012 (17:41 IST)
WD
ಕೊನೆಗೂ ಸಹಾರಾ ಪುಣೆ ವಾರಿಯರ್ಸ್ ತಂಡದ ಆತಿಥೇಯ ತಾಣದ ಕನಸು ನನಸಾಗಿದೆ. ನಗರದಿಂದ 20 ಕಿ. ಮೀ. ದೂರದಲ್ಲಿ 260 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ಪುಣೆ ತಂಡದ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ಗಾಹುಂಜೆ ಎಂಬಲ್ಲಿ ನಿರ್ಮಾಣವಾಗಿರುವ ಪ್ರಸ್ತುತ ಸ್ಟೇಡಿಯಂ ಪುಣೆ ತಂಡದ ಆತಿಥ್ಯ ತಾಣವೆನಸಲಿದೆ. ಇದೇ ಮೈದಾನದಲ್ಲಿ ಎಪ್ರಿಲ್ 8ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಸೌರವ್ ಗಂಗೂಲಿ ಆತಿಥೇಯ ತಂಡವನ್ನು ಮುನ್ನಡೆಸಲಿದ್ದಾರೆ.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ನಿರ್ಮಿಸಿರುವ ಈ ನೂತನ ಮೈದಾನ 45 ಸಾವಿರ ಪ್ರೇಕ್ಷಕರನ್ನು ಹೊಂದುವ ಸಾಮರ್ಥ್ಯವಿದೆ. ಅಲ್ಲದೆ ಪುಣೆ ತಂಡದ ಎಲ್ಲ ಒಂಬತ್ತು ಆತಿಥೇಯ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ವೆಬ್ದುನಿಯಾವನ್ನು ಓದಿ