ಐಪಿಎಲ್ ಮ್ಯಾಚ್ ಫಿಕ್ಸಿಂಗ್; ಐಟಂ ಗರ್ಲ್ ಸಂಪರ್ಕಿಸಿದ ಬುಕ್ಕಿ

ಸೋಮವಾರ, 9 ಮೇ 2011 (17:26 IST)
ಹೇಗಾದರೂ ಮಾಡಿ ತಮ್ಮ ಬೆಟ್ಟಿಂಗ್ ಜಾಲವನ್ನು ಕುದುರಿಸಲು ಬುಕ್ಕಿಗಳು ಹೊಸ ಹೊಸ ಹಾದಿಯನ್ನು ಹುಡುತ್ತಲೇ ಇರುತ್ತಾರೆ. ಇಂತಹದೊಂದು ಪ್ರಯತ್ನ ಐಪಿಎಲ್‌ನಲ್ಲೂ ನಡೆದಿದ್ದು, ಇಂಗ್ಲೆಂಡ್ ಮೂಲದ ಬುಕ್ಕಿಯೊಬ್ಬ ಐಟಂ ಗರ್ಲ್ ಒಬ್ಬಾಕೆಯನ್ನು ಸಂಪರ್ಕಿಸಿದ ಘಟನೆ ವರದಿಯಾಗಿದೆ.

ಸ್ವತ: ಐಟಂ ಡಾನ್ಸರ್ ಲಿಜಾ ಮಲಿಕ್ ಇದನ್ನು ಬಹಿರಂಗಪಡಿಸಿದ್ದಾರೆ. ರಜಾಕ್ ಅಕ ರಾಜ್ ಎಂದು ಹೇಳಿಕೊಳ್ಳುವ ಯುಕೆ ಮೂಲದ ಬುಕ್ಕಿಯೊಬ್ಬ ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡುವ ಸಲುವಾಗಿ ನನ್ನನ್ನು ಸಂಪರ್ಕಿಸಿರುವುದಾಗಿ ಆಕೆ ಬಹಿರಂಗಪಡಿಸಿದ್ದಾರೆ.

ಭಾರತೀಯ ಆಟಗಾರರನ್ನು ಪರಿಚಯ ಮಾಡಿ ಕೊಡುವಂತೆ ಆಟ ಬೇಡಿಕೆಯಿರಿಸಿದ್ದ. ಇದಕ್ಕಾಗಿ 50 ಲಕ್ಷ ರೂಪಾಯಿ ಆಫರ್ ಮಾಡಿರುವುದಾಗಿ ಆಕೆ ತಿಳಿಸಿದ್ದಾರೆ.

ಬುಕ್ಕಿಗಳ ಬೇಡಿಕೆಗೆ ಒಪ್ಪದಿದ್ದಾಗ ಬೆದರಿಕಾ ಕಾಲ್‌ಗಳು ಬಂದಿರುವುದಾಗಿ ಲಿಜಾ ತಿಳಿಸಿದ್ದಾರೆ. ಸ್ಟೇಜ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಥಾಲೈಂಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದಾಗಿ ಆಕೆ ತಿಳಿಸಿದ್ದು, ಈ ಬಗ್ಗೆ ಪೊಲೀಸ್ ದೂರು ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ