ಐಪಿಎಲ್ ಸ್ಪಾಟ್ ಫಿಕ್ಸಿಂಗ್: ಕೇರಳ ಎಕ್ಸ್‌ಪ್ರೆಸ್‌ಗೆ ಅಜೀವ ನಿಷೇಧ

ಶುಕ್ರವಾರ, 13 ಸೆಪ್ಟಂಬರ್ 2013 (17:37 IST)
PTI
ಕ್ರಿಕೆಟ್ ಜಗತ್ತನ್ನೆ ಬೆಚ್ಚಿಬೀಳಿಸಿದ್ದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಭಾರತೀಯ ಕ್ರಿಕೆಟಿಗ ಶ್ರೀಶಾಂತ್ ಸೇರಿದಂತೆ ನಾಲ್ವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಜೀವ ನಿಷೇಧ ಹೇರಿದೆ.

ಇಂದು ನಡೆದ ಬಿಸಿಸಿಐ ಸಮನ್ವಯ ಸಮಿತಿ ಸಭೆಯಲ್ಲಿ ಕಳಂಕಿತ ರಾಜಸ್ತಾನ ರಾಯಲ್ಸ್ ತಂಡದ ಆಟಗಾರರಾದ ಶ್ರೀಶಾಂತ್, ಅಜಿತ್ ಚಾಂಡೀಲಾ, ಅಂಕಿತ್ ಚೌವ್ಹಾಣ್ ಹಾಗೂ ಅಮಿತ್ ಸಿಂಗ್ ಅವರ ವಿರುದ್ಧ ಆಜೀವ ನಿಷೇಧ ಹೇರುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕಳೆದ ಐಪಿಎಲ್-7ನಲ್ಲಿ ಈ ನಾಲ್ವರ ಆಟಾಗರರ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಿಸಿಸಿಐ ಆಜೀವ ನಿಷೇಧ ಆದೇಶ ಹೊರಡಿಸಿದೆ. ಐಪಿಎಲ್ ಸ್ಪಾಟ್‌ಫಿಕ್ಸಿಂಗ್ ಪ್ರಕರಣ ಸಂಬಂಧ ತನಿಖೆಗೆ ಬಿಸಿಸಿಐ ರಚಿಸಿದ್ದ ಸಮಿತಿ ತನ್ನ ತನಿಖೆಯನ್ನು ಪೂರ್ಣಗೊಳಿಸಿ ಇಂದು ವರದಿ ನೀಡಿದ್ದು, ಕಳಂಕಿತ ನಾಲ್ವರು ಆಟಗಾರರು ಕಳ್ಳಾಟದಲ್ಲಿ ಭಾಗಿಯಾಗಿದ್ದು ನಿಜ ಎಂದು ವರದಿ ಹೇಳಿದೆ.

ಅಲ್ಲದೆ ಸ್ವತಃ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ರವಿ ಸವಾನಿ ಅವರು ನಡೆಸಿದ್ದ ಪ್ರತ್ಯೇಕ ತನಿಖೆಯಲ್ಲಿಯೂ ಇಬ್ಬರು ಆಟಗಾರರು ತಪ್ಪೆಸಗಿರುವುದು ಸಾಬೀತಾಗಿದೆ. ಶ್ರೀಶಾಂತ್ ಮತ್ತು ಅಜಿತ್ ಚಾಂಡೀಲಾ ಮತ್ತು ಅಂಕಿತ್ ಚೌವ್ಹಾಣ್ ಅವರು ಹಣ ಪಡೆದು ಕಳ್ಳಾಟದಲ್ಲಿ ಪಾಲ್ಗೊಂಡಿದ್ದರು ಎಂದು ತನಿಖೆಯಿಂದಾಗಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ