ಐಪಿಎಲ್ ಹರಾಜು: ಯುವಿ ಆರ್‌ಸಿಬಿಗೆ 14 ಕೋಟಿಗೆ ರೂ.ಗೆ ಬಿಕರಿ

ಬುಧವಾರ, 12 ಫೆಬ್ರವರಿ 2014 (14:20 IST)
PR
PR
ಬೆಂಗಳೂರು: ವಿರಾಟ್ ಕೊಹ್ಲಿ ತಮ್ಮ ಸದೃಢ ಬ್ಯಾಟಿಂಗ್ ಲೈನ್ ಅಪ್‌ಗೆ ಯುವರಾಜ್ ಸಿಂಗ್ ಅವರನ್ನು ಸೇರಿಸಿಕೊಳ್ಳುವ ಬಯಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನ ಪ್ರಥಮ ಸುತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ಎಡಗೈ ಆಲ್‌ರೌಂಡರ್ ಆಟಗಾರನ ಖರೀದಿಗೆ 14 ಕೋಟಿ ರೂ. ಪಾವತಿ ಮಾಡಿತು. ಯುವರಾಜ್ ಅವರು ಇಂಗ್ಲೆಂಡ್‌ನ ಕೆವಿನ್ ಪೀಟರ್‌ಸನ್‌ಗಿಂತ ಹೆಚ್ಚು ಮೊತ್ತಕ್ಕೆ ಬಿಕರಿಯಾದರು.
ಆರ್‌ಸಿಬಿ ತಂಡದ ಫ್ರಾಂಚೈಸಿ ವಿಜಯ್ ಮಲ್ಯ ಈ ಕುರಿತು, ನಾವು ಬೌಲಿಂಗ್ ಬಲಪಡಿಸಲು ಇಚ್ಛಿಸಿದ್ದು, ಯುವರಾಜ್ ಅದಕ್ಕೆ ನೆರವಾಗುತ್ತಾರೆ ಎಂದು ಆಶಾವಾದ ವ್ಯಕ್ತಪಡಿಸಿದರು.

ದೆಹಲಿ ಜೋಕರ್ ಕಾರ್ಡ್ ಪರಿಕಲ್ಪನೆಯನ್ನು ಬಳಸಿಕೊಂಡು ಪೀಟರ್‌ಸನ್‌ಗೆ ಅತ್ಯಧಿಕ 9 ಕೋಟಿಗೆ ಬಿಡ್ ಮಾಡಿತು. ಆರ್‌ಸಿಬಿ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತೀವ್ರ ಬಿಡ್ಡಿಂಗ್ ಹೋರಾಟದಲ್ಲಿ ಭಾಗಿಯಾಗಿದ್ದರಿಂದ ಯುವರಾಜ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಬೆಳಗಿನ ಸೆಷನ್ ದ್ವಿತೀಯಾರ್ಧದಲ್ಲಿ, ದೆಹಲಿ ಬ್ಯಾಟ್ಸ್‌ಮನ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರನ್ನು 12.5 ಕೋಟಿಗೆ ಬಿಕರಿ ಮಾಡಿ ಆಶ್ಚರ್ಯ ಮೂಡಿಸಿದೆ.ದೆಹಲಿ ತಮ್ಮ 60 ಕೋಟಿ ಹಣವನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡಿತು.

PR
PR
ಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಜೆ.ಪಿ.ಡುಮಿನಿ ಅವರನ್ನು 2.2ಕೋಟಿ ರೂ.ಗೆ, ಮನೋಜ್ ತಿವಾರಿಗೆ 2.8 ಕೋಟಿಗೆ ಬಿಕರಿ ಮಾಡಿದೆ.ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಆರೋನ್ ಫಿಂಚ್ ಅವರನ್ನು 4 ಕೋಟಿ ರೂ. ಕೊಟ್ಟು ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿದೆ. ಅವರ ಮೂಲದರ 1 ಕೋಟಿ ರೂ.ಗಳಾಗಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ ರಾಬಿನ್ ಉತ್ತಪ್ಪ ಅವರನ್ನು 5 ಕೋಟಿ ರೂ.ಗೆ ಖರೀದಿಸಿತು. ಚೆನ್ನೈ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಡ್ವಾಯ್ನೆ ಸ್ಮಿತ್ ಅವರನ್ನು 4.5 ಕೋಟಿಗೆ ಖರೀದಿಸಿತು.ದೆಹಲಿ ವೀರೇಂದ್ರ ಸೆಹ್ವಾಗ್ ಅವರನ್ನು ಖರೀದಿಸಲು ನಿರಾಕರಿಸಿದ ಬಳಿಕ, ಕಿಂಗ್ಸ್ ಇಲೆವೆನ್ ಪಂಜಾಬ್ 3.2ಕೋಟಿ ರೂ.ಗಳಿಗೆ ಬಿಡ್ ಮಾಡಿ ಅವರನ್ನು ಖರೀದಿಸಿತು. ಆಷಶ್ ಸ್ಟಾರ್ ಮಿಚೆಲ್ ಚಾನ್ಸನ್ ಅವರನ್ನು 6.5ಕೋಟಿ ರೂ.ಗೆ ಖರೀದಿಸುವ ಮೂಲಕ ಕಿಂಗ್ಸ್ ಇಲೆವೆನ್ ಬ್ಯಾಟಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ.ದೆಹಲಿ ತನ್ನ ಖರೀದಿಯಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿತು.

ಮಹೇಲಾ ಜಯವರ್ದನೆ ಅವರನ್ನು ಯಾವ ಫ್ರಾಂಚೈಸಿಯೂ ಬಿಡ್ ಮಾಡಲಿಲ್ಲ. ಅವರ ಮೂಲಧನ 2 ಕೋಟಿ ರೂ.ಗಳಾಗಿತ್ತು. ಭಾರತದ ವಿರುದ್ಧ ಸರಣಿಯಲ್ಲಿ ಉತ್ತಮ ಫಾರಂನಲ್ಲಿದ್ದ ನ್ಯೂಜಿಲೆಂಡ್ ರೋಸ್ ಟೇಲರ್ ಅವರಿಗೆ ಕೂಡ ಇದೇ ಗತಿಯಾಯಿತು.ಜಾಕ್ವೆಸ್ ಕಾಲಿಸ್ ಅವರು ಕೆಕೆಆರ್ ಜತೆ ಉಳಿಯಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ದಕ್ಷಿಣ ಆಫ್ರಿಕಾ ಆಲ್‌ರೌಂಡರ್ ಪರ 5.5 ಕೋಟಿ ಬಿಡ್ ಮಾಡಿತ್ತು. ಕೆಕೆಆರ್ ಜೋಕರ್ ಕಾರ್ಡ್ ಬಳಸಿಕೊಂಡು ಕ್ಯಾಲಿಸ್ ಅವರನ್ನು ಉಳಿಸಿಕೊಂಡಿತು.

ವೆಬ್ದುನಿಯಾವನ್ನು ಓದಿ