ಐಪಿಎಲ್ 5ನೇ ಆವೃತ್ತಿಯಲ್ಲೂ ಉತ್ತಮ ಆಟ: ಗೇಲ್ ವಿಶ್ವಾಸ

ಶನಿವಾರ, 31 ಮಾರ್ಚ್ 2012 (12:27 IST)
WD
ಕಳೆದ ಬಾರಿಯ ಹಾಟೆಸ್ಟ್ ಆಟಗಾರ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಜತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಷ್ಟು ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದೆ ಎಂಬುದಂತು ಗೊತ್ತಿಲ್ಲ. ಆದರೆ ದಾಖಲೆಗಳ ಪ್ರಕಾರ 560000 ಅಮೆರಿಕನ್ ಡಾಲರ್‌ಗೆ ವಿಂಡೀಸ್ ದೈತ್ಯ ಗೇಲ್‌ರನ್ನು ಆರ್‌ಸಿಬಿ ಉಳಿಸಿಕೊಂಡಿತ್ತು.

ಇದರಂತೆ ಪ್ರತಿಕ್ರಿಯಿಸಿರುವ ಗೇಲ್, ಆರ್‌ಸಿಬಿ ತಂಡಕ್ಕೆ ಮರಳಿರುವುದು ಸಂತಸ ತಂದಿದೆ ಎಂದರು. ಇಲ್ಲಿನ ಸವಲತ್ತುಗಳು ಯಾವತ್ತೂ ಉತ್ತಮವಾಗಿದ್ದು, ನನ್ನನ್ನು ಮತ್ತೆ ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ ಎಂದಿದ್ದಾರೆ.

ನಾನೀಗ ಐಪಿಎಲ್ ಐದನೇ ಆವೃತ್ತಿಯನ್ನು ಎದುರು ನೋಡುತ್ತಿದ್ದು, ಕಳೆದ ಬಾರಿಗಿಂತ ಉತ್ತಮ ಪ್ರದರ್ಶನ ಮಾಡುವ ಭರವಸೆಯಿದೆ ಎಂದರು.

ಕಳೆದ ವರ್ಷ ಫೈನಲ್‌ಗೇರಿದ ನಮ್ಮ ಮೇಲೆ ನಿರೀಕ್ಷೆ ಹೆಚ್ಚಿದೆ. ಟೂರ್ನಿಯಲ್ಲಿ ನಮ್ಮ ಆರಂಭ ನಿರ್ಣಾಯಕವೆನಿಸಲಿದೆ ಎಂದು ವಿಂಡೀಸ್ ಎಡಗೈ ಆಟಗಾರ ನುಡಿದರು. ಕಳೆದ ಬಾರಿ 608 ರನ್ ಪೇರಿಸಿದ್ದ ಗೇಲ್ ಆರೆಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದರು.

ವೆಬ್ದುನಿಯಾವನ್ನು ಓದಿ