ಐಸಿಸಿ ವರ್ಷದ ಏಕದಿನ ತಂಡಕ್ಕೂ ಧೋನಿ ಸಾರಥಿ; ಸಚಿನ್‌ಗಿಲ್ಲ ಸ್ಥಾನ!

ಸೋಮವಾರ, 12 ಸೆಪ್ಟಂಬರ್ 2011 (18:09 IST)
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಐಸಿಸಿ ವರ್ಷದ ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಭಾರತದ ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ ಸಹಿತ ನಾಲ್ವರು ಆಟಗಾರರು ಯಶ್ವಸಿಯಾಗಿದ್ದಾರೆ.

ವೆಸ್ಟ್‌ಇಂಡೀಸ್‌ನ ಮಾಜಿ ದಿಗ್ಗಜ ಕ್ಲೈವ್ ಲಾಯ್ಡ್ ನೇತೃತ್ವದ ಆಯ್ಕೆ ಸಮಿತಿಯು ತಂಡವನ್ನು ಆರಿಸಿದೆ. ನಾಯಕ ಧೋನಿ ಅವರಲ್ಲದೆ ಹೊಡೆ ಬಡಿಯ ದಾಂಡಿಗ ವೀರೇಂದ್ರ ಸೆಹ್ವಾಗ್, ಆಲ್‌ರೌಂಡರ್ ಯುವರಾಜ್ ಸಿಂಗ್ ಹಾಗೂ ವೇಗದ ಬೌಲರ್ ಜಹೀರ್ ಖಾನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆ ಮೂಲಕ ಸತತ ನಾಲ್ಕನೇ ಬಾರಿಯೂ ಐಸಿಸಿ ಕನಸಿನ ತಂಡದಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆಗೆ ಮಹಿ ಪಾತ್ರರಾಗಿದ್ದಾರೆ.

ಐಸಿಸಿ ಕನಸಿನ ತಂಡ:

1. ತಿಲಕರತ್ನೆ ದಿಲ್‌ಶಾನ್ (ಶ್ರೀಲಂಕಾ)
2. ವೀರೇಂದ್ರ ಸೆಹ್ವಾಗ್ (ಭಾರತ)
3. ಕುಮಾರ ಸಂಗಕ್ಕರ (ಶ್ರೀಲಂಕಾ)
4. ಅಬ್ರಹಾಂ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ)
5. ಶೇನ್ ವಾಟ್ಸನ್ (ಆಸ್ಟ್ರೇಲಿಯಾ)
6. ಯುವರಾಜ್ ಸಿಂಗ್ (ಭಾರತ)
7. ಮಹೇಂದ್ರ ಸಿಂಗ್ ಧೋನಿ (ಭಾರತ, ನಾಯಕ ಹಾಗೂ ವಿಕೆಟ್ ಕೀಪರ್)
8. ಗ್ರೇಮ್ ಸ್ವಾನ್ (ಇಂಗ್ಲೆಂಡ್)
9. ಉಮರ್ ಗುಲ್ (ಪಾಕಿಸ್ತಾನ)
10. ಡೇಲ್ ಸ್ಟೈನ್ (ದಕ್ಷಿಣ ಆಫ್ರಿಕಾ)
11. ಜಹೀರ್ ಖಾನ್ (ಭಾರತ)
12ನೇ ಆಟಗಾರ ಲಸಿತ್ ಮಾಲಿಂಗ (ಶ್ರೀಲಂಕಾ)

ವೆಬ್ದುನಿಯಾವನ್ನು ಓದಿ