ಕನಸಿನ ಮನೆ ಪ್ರವೇಶಿಸಿದ ಸಚಿನ್ ತೆಂಡೂಲ್ಕರ್ ಫ್ಯಾಮಿಲಿ!

ಗುರುವಾರ, 29 ಸೆಪ್ಟಂಬರ್ 2011 (12:22 IST)
ಮುಂಬೈ: ಎಲ್ಲರಲ್ಲೂ ಸ್ವಂತ ಮನೆ ನಿರ್ಮಿಸುವ ಕನಸು ಇದ್ದೇ ಇರುತ್ತದೆ. ಹಾಗೆಯೇ ನನ್ನಲ್ಲೂ ಕನಸಿತ್ತು. ಆ ಕನಸನ್ನು ನನಸಾಗಿಸಲು ಸಾಧ್ಯವಾಗಿರುವುದರಲ್ಲಿ ಅತೀವ ಸಂತಸಗೊಂಡಿದ್ದೇನೆ ಎಂದು ಮುಂಬೈನ ಬಾಂದ್ರಾದಲ್ಲಿ ನೂತನ ಗೃಹ ಪ್ರವೇಶ ಮಾಡಿರುವ ಭಾರತ ಕ್ರಿಕೆಟ್ ತಂಡದ ಜೀವಂತ ದಿಗ್ಗಜ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

PR


ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

40 ಕಾರುಗಳನ್ನು ಪಾರ್ಕಿಂಗ್ ಮಾಡುವ ಸೌಕರ್ಯವುಳ್ಳ 70 ಕೋಟಿ ಬೆಳೆಬಾಳುವ ತಮ್ಮ ಕನಸಿಗೆ ಮನೆಗೆ ತೆಂಡೂಲ್ಕರ್ ಫ್ಯಾಮಿಲ್ ಬುಧವಾರ ಗೃಹ ಪ್ರವೇಶ ಮಾಡಿಕೊಂಡಿದ್ದರು.

ಈ ಮೊದಲಿದ್ದ ಕಟ್ಟಡವನ್ನು ನಾವು ಕ್ರೀಡಾ ವಿಭಾಗದಲ್ಲಿ ಪಡೆದುಕೊಂಡಿದ್ದೆವು. ಆದರೆ ಅದನ್ನೀಗ ಇತರ ಕ್ರೀಡಾಪಟುಗಳು ಸಹ ಬಳಸಬಹುದಾಗಿದೆ. ನಾವೀಗ ನೂತನ ಮನೆಗೆ ಸ್ಥಳಾಂತರ ಮಾಡಿದ್ದೇವೆ ಎಂದು ಸಚಿನ್ ತಿಳಿಸಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಜೂನ್ 11ರಂದು ನಾವು 'ಗೃಹ ಶಾಂತಿ' ಹಾಗೂ 'ವಾಸ್ತು ಪೂಜೆ'ಯನ್ನು ಮಾಡಿಕೊಂಡಿದ್ದೆವು. ತದಾನಂತರ ಮುಂಬೈಗೆ ಭೇಟಿ ನೀಡಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ನಾನೀಗ ನಗರದಲ್ಲಿದ್ದು, ತಾಯಿ ಅವರಿಗೂ ಮನೆ ತೋರಿಸಿಕೊಟ್ಟಿದ್ದೇನೆ ಎಂದು ಸಚಿನ್ ವಿವರಿಸಿದ್ದಾರೆ.

ವಿಶೇಷ ಪೂಜೆಯ ನಂತರ ನಾವು ಗೃಹ ಪ್ರವೇಶ ಮಾಡಿದ್ದೇವೆ. ಆದರೆ ಮಕ್ಕಳನ್ನು ಇದುವರೆಗೂ ಕರೆ ತರಲು ಸಾಧ್ಯವಾಗಲಿಲ್ಲ ಎಂದು ಸಚಿನ್ ಸೇರಿಸಿದರು.

2007ರಲ್ಲಿ 39 ಕೋಟಿ ತೆತ್ತು ಖರೀದಿಸಿದ್ದ ಸಚಿನ್, ತಮ್ಮ ಕನಸಿನ ಮನೆಯನ್ನು ಮರು ನಿರ್ಮಾಣ ಮಾಡಿಕೊಂಡಿದ್ದರು. ಹೊರಗಿನ ನೋಟದಿಂದ ಮೂರು ಅಂತಸ್ತಿನಂತೆ ಕಾಣಿಸಲ್ಪಡುವ ಈ ಕಟ್ಟಡವು ಒಟ್ಟು ಐದು ಅಂತಸ್ತನ್ನು ಹೊಂದಿದೆ.

ಭದ್ರತಾ ದೃಷ್ಟಿಯಿಂದ ಮನೆಯ ಸುತ್ತಲೂ ಬೃಹತ್ ಆಕಾರದ ಗೋಡೆಗಳನ್ನು ಕಟ್ಟಲಾಗಿದ್ದು, ಸಿಸಿಟಿವಿ ಸಹಿತ ಸೆನ್ಸರ್‌ಗಳನ್ನು ಆಳವಡಿಸಲಾಗಿದೆ. ಮೂಲಗಳ ವರದಿಯಂತೆ ಶೇಕಡಾ 90 ಸ್ಥಳಾಂತರ ಕಾರ್ಯವು ಪೂರ್ಣಗೊಂಡಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ