ಕೋಲ್ಕತ್ತಾದಲ್ಲಿ ಕ್ರಿಕೆಟಿಗರಿಗೆ ಸುರಕ್ಷೆಯ ಭದ್ರಕೋಟೆ

ಮಂಗಳವಾರ, 27 ನವೆಂಬರ್ 2007 (11:42 IST)
ಬದ್ಧ ವೈರಿ ಪಾಕಿಸ್ತಾನವನ್ನು ಮೊದಲ ಪಂದ್ಯದಲ್ಲಿ ಮಣಿಸಿದ ಟೀಮ್ ಇಂಡಿಯಾ ಸಿಟಿ ಆಫ್ ಜಾಯ್ ಕೋಲ್ಕತ್ತಾ ನಗರವನ್ನು ಭರ್ಜರಿಯಾಗಿ ಪ್ರವೇಶಿಸಿದೆ. ಆದರೆ ಉತ್ತರ ಪ್ರದೇಶದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟ ಟೀಮ್ ಇಂಡಿಯಾದ ಮತ್ತು ಪಾಕಿಸ್ತಾನದ ಕ್ರಿಕೆಟಿಗರು ಪೊಲೀಸರ ನೆರಳಿನಲ್ಲಿ ಕ್ರಿಕೆಟ್ ಆಡುವುದು ಅಲ್ಲದೇ ಕೆಲವು ದಿನಗಳ ಕಾಲ ಇರಬೇಕಾದ ಪರಿಸ್ಥಿತಿ ತಲೆದೊರಿದೆ.

ನವಂಬರ 30ರಿಂದ ಈಡನ್ ಗಾರ್ಡನ್‌ನಲ್ಲಿ ಸರಣಿಯ ದ್ವಿತೀಯ ಪಂದ್ಯ ನಡೆಯಲಿದ್ದು. ಲಖ್ನೋ,ವಾರಾಣಸಿ ಮತ್ತು ಫೈಜಾಬಾದ್‌ಗಳಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಈಡನ್ ಗಾರ್ಡನ್ ಮೈದಾನದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 60ಜನ ಪೊಲೀಸ್ ಅಧಿಕಾರಿಗಳು ಮೈದಾನದ ಪ್ರತಿ ಸ್ಥಳವನ್ನು ಪರೀಶಿಲಿಸುತ್ತಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿಎಬಿ ಜಂಟಿ ಕಾರ್ಯದರ್ಶಿ ಸಮರ್ ಪಾಲ್ ಅವರು ಮೈದಾನದ ಪ್ರತಿ ಅಂಗುಲ ಪೊಲೀಸರ ಪರೀಶಿಲನೆಗೆ ಒಳಗಾಗುತ್ತಿದೆ ಎಂದು ಹೇಳಿದ್ದಾರೆ.

ಮೈದಾನದಲ್ಲಿ, ಮೈದಾನದ ಪ್ರವೇಶ ದ್ವಾರಗಳಲ್ಲಿ ಬಿಗಿ ಪೊಲೀಸ್ ಕಾವಲು ಪಡೆಯನ್ನು ನಿಯೋಜಿಸಲಾಗಿದೆ. ಪ್ರೇಕ್ಷಕ ಗ್ಯಾಲರಿಯ ನವಿಕರಣ ರಿಪೇರಿ ಮುಂತಾದ ಕೆಲಸಗಳಿಗೆ ಬರುವ ಕಾರ್ಮಿಕರನ್ನು ಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಮೈದಾನದ ಅಂತರಿಕ ಸುರಕ್ಷಾ ವ್ಯವಸ್ಥೆಯನ್ನು ಕೂಡ ಬಲಪಡಿಸಲಾಗಿದೆ. ಯಾವುದೇ ಅಪಾಯವನ್ನು ನಾವು ಮೈಮೇಲೆ ಎಳೆದುಕೊಳ್ಳುವುದಕ್ಕೆ ಸಿದ್ಧವಿಲ್ಲ ಎಂದು ಸುರಕ್ಷಾ ವ್ಯವಸ್ಥೆಯ ಪರೀಶಿಲನಾ ಸಭೆಯ ಅದ್ಯಕ್ಷತೆ ವಹಿಸಿದ್ದ ಪೊಲೀಸ್ ಕಮಿಷನರ್ ಗೌತಮ್ ಮೋಹನ್ ಚಕ್ರವರ್ತಿ ಹೇಳಿದ್ದಾರೆ.

guru [email protected] ಎಂಬ ಅನಾಮಿಕ ಇ-ಮೇಲ್ ವಿಳಾಸದಿಂದ ಚೆನ್ನೈ, ಘಾಜಿಯಾಬಾದ್, ನವದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಇಸ್ಲಾಮಾಬಾದ್ ನಗರಗಳಲ್ಲಿ ಸರಣಿ ಬಾಂಬ್ ಸ್ಫೋಟ ಮಾಡಲಾಗುವುದು ಎಂಬ ಬೆದರಿಕೆ ಪತ್ರ ಖಾಸಗಿ ಟಿವಿ ಚಾನೆಲ್‌ಗಳಿಗೆ ಬಂದ ನಂತರ ಭಾರಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಸುರಕ್ಷೆ ನಮಗೆ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಪಾಕ್ ತಂಡದ ಹತ್ತಿರ ಅಭಿಮಾನಿಗಳನ್ನು ಆಗಲಿ, ಯಾರನ್ನು ಬಿಡಲಾಗುವುದಿಲ್ಲ. ಅಲ್ಲದೇ ಪಾಕ್ ಕ್ರಿಕೆಟ್ ತಂಡ ಅಭ್ಯಾಸ ನಡೆಸುವ ಸಮಯದಲ್ಲಿ ಕೂಡ ಯಾರನ್ನು ಹತ್ತಿರಕ್ಕೆ ಬಿಡಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ