ಗಾಯಗೊಂಡ ಜಹೀರ್, ಸಮಸ್ಯೆಯಲ್ಲಿ ಭಾರತ

ಶುಕ್ರವಾರ, 31 ಆಗಸ್ಟ್ 2007 (16:27 IST)
ಓಲ್ಡ್ ಟ್ರಾಫೋರ್ಡ್‌ನಲ್ಲಿ ನಡೆದ ಸರಣಿಯ ನಾಲ್ಕನೆ ಪಂದ್ಯದಲ್ಲಿ ವೇಗದ ಬೌಲರ್ ಜಹೀರ್ ಖಾನ್ ಮೊಣಕಾಲು ಉಳುಕಿಸಿಕೊಂಡಿದ್ದು, ಸರಣಿಯಲ್ಲಿ ಈಗಾಗಲೇ 3-1 ಅಂತರದಲ್ಲಿ ಹಿನ್ನಡೆ ಅನುಭವಿಸುತ್ತಿರುವ ಟೀಮ್ ಇಂಡಿಯಾಗೆ ಬರಸಿಡಿಲು ಬಡಿದಂತಾಗಿದೆ.

ಟೀಮ್ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರ, ಬ್ಯಾಟಿಂಗ್ ಮಾಡುತ್ತಿರುವ ಸಮಯದಲ್ಲಿ ಮೊಣಕಾಲು ತಿರುಚಿ ಉಳುಕಿಸಿಕೊಂಡಿದೆ.

ಓಲ್ಡ್‌ಟ್ರಾಫೋರ್ಡ್ ಪಂದ್ಯವನ್ನು ಕೇವಲ ಮೂರು ವಿಕೆಟ್‌ಗಳ ಅಂತರದಿಂದ ಸೋತಿರುವ ಭಾರತ. ಜಹೀರ್ ಖಾನ್ ಇಲ್ಲದೆ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವುದು ಕಷ್ಟ. ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೆ ಪಂದ್ಯದಲ್ಲಿ ಅಗ್ರ ಪಂಕ್ತಿಯ ಬ್ಯಾಟ್ಸ್‌ಮನ್‌ಗಳು ವಿಫಲವಾದ ನಂತರ ಕ್ರೀಸ್‌ಗೆ ಬಂದ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಜಹೀರ್ ಖಾನ್ ಅವರು ಅಂತಿಮ ಓವರುಗಳಲ್ಲಿ ಆದಷ್ಟು ರನ್ ಕದ್ದು ತಂಡದ ಮೊತ್ತವನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು.

19 ಎಸೆತಗಳನ್ನು ಎದುರಿಸಿದ್ದ ಜಹೀರ್ ಖಾನ್, 47 ಓವರಿನ ಕೊನೆಯ ಎಸೆತದಲ್ಲಿ ರನ್ ಕದಿಯುವ ಪ್ರಯತ್ನದಲ್ಲಿ ಇದ್ದಾಗ ಕಾಲು ಉಳುಕಿಸಿಕೊಂಡಿದ್ದಾರೆ. ಔಟಾದ ನಂತರವೂ ಜಹೀರ್ ಖಾನ್ ನೋವು ಎಂದು ಬಳಲಿಲ್ಲ. ಸದ್ಯಕ್ಕೆ ನಮಗೆ ಎರಡು ದಿನ ವಿಶ್ರಾಂತಿ ಇದೆ ಅಲ್ಲಿಯವರೆಗೆ ನೋವು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ನಾಯಕ ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ

ವೆಬ್ದುನಿಯಾವನ್ನು ಓದಿ